ಮತದಾನಕ್ಕೂ ಇನ್ನುಮುಂದೆ ಆಧಾರ್ ಕಾರ್ಡ್ ಕಡ್ಡಾಯ…?
ನವದೆಹಲಿ: ಶೀಘ್ರವೇ ಮತದಾನಕ್ಕೂ ಆಧಾರ್ ಕಾರ್ಡನ್ನು ಏಕೈಕ ಗುರುತು ಪತ್ರವಾಗಿ ಬಳಸಬಹುದು ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ ಟಿ.ಎಸ್.ಕೃಷ್ಣಮೂರ್ತಿ ಹೇಳಿದ್ದಾರೆ.
ದೇಶದಲ್ಲಿ ಬಹುತೇಕ ಮಂದಿ ಆಧಾರ್ ಕಾರ್ಡ್ ಹೊಂದಿದ್ದಾರೆ. ಇನ್ನೂ ಕಾರ್ಡ್ ಪಡೆಯದವರು 2019 ಅಥವಾ 2020 ಕಟ್ ಆಫ್ ಡೇಟ್ ಎಂದು ನಿಗದಿಸಬಹುದು. ಆ ಬಳಿಕ ಆಧಾರ್ ಕಾರ್ಡನ್ನು ಮತದಾನಕ್ಕೆ ಏಕೈಕ ಗುರುತು ಪತ್ರವೆಂದು ಸರ್ಕಾರ ಘೋಷಿಸಬಹುದು ಎಂದರು.