ಕಾಂಗ್ರೆಸ್-ಬಿಜೆಪಿ ನಡುವೆ ಈಗ ಬಾಪ್ ಕೌನ್ ಹೇ ಸಮರ!

ಬುಧವಾರ, 28 ನವೆಂಬರ್ 2018 (08:55 IST)
ನವದೆಹಲಿ: ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ಈಗ ತಂದೆ ಯಾರು ಎಂಬ ಸಮರ ಶುರುವಾಗಿದೆ! ಇದಕ್ಕೆ ನಾಂದಿ ಹಾಡಿದ್ದು ಕಾಂಗ್ರೆಸ್ ನಾಯಕ ವಿಲಾಸ್ ಮುತ್ತೇಮ್ವಾರ್.


ರಾಹುಲ್ ಗಾಂಧಿ ಐದು ತಲೆಮಾರಿನ ಹೆಸರು ಜಗತ್ತಿಗೇ ಗೊತ್ತು. ಆದರೆ ಪ್ರಧಾನಿ ಮೋದಿ ತಂದೆಯ ಬಗ್ಗೆ ಯಾರಿಗಾದರೂ ಗೊತ್ತಾ ಎಂದು ವಿಲಾಸ್ ಲೇವಡಿ ಮಾಡಿದ್ದರು. ಇದಕ್ಕೆ ಪ್ರಧಾನಿ ಮೋದಿ ತೀರಿಕೊಂಡ ನನ್ನ ತಂದೆಯನ್ನು ರಾಜಕೀಯಕ್ಕೆ ಯಾಕೆ ಎಳೆದು ತರುತ್ತೀರಿ ಎಂದು ಕಿಡಿ ಕಾರಿದ್ದರು.

ಇದೀಗ ಕೇಂದ್ರ ಸಚಿವ ಅರುಣ್ ಜೇಟ್ಲಿ ಕಾಂಗ್ರೆಸ್ ಗೆ ತಕ್ಕ ತಿರುಗೇಟು ನೀಡಿದ್ದಾರೆ. ಮೋದಿ ತಂದೆ ಯಾರು ಎಂದು ಪ್ರಶ್ನಿಸಿದವರಿಗೆ ಸರ್ದಾರ್ ಪಟೇಲ್ ರಂತಹ, ದೇಶಕ್ಕಾಗಿ ಕೊಡುಗೆ ನೀಡಿದ ಹಲವಾರ್ ಮಹಾನ್ ನಾಯಕರ ತಂದೆ ಯಾರು ಎಂಬ ಬಗ್ಗೆ ಯಾರಾದರೂ ಪ್ರಶ್ನೆ ಮಾಡಿದ್ದಾರಾ? ಕಾಂಗ್ರೆಸ್ ಗೆ ದೊಡ್ಡ ಸರ್ ನೇಮ್ ಇಟ್ಟುಕೊಂಡು, ತಂದೆಯ ಹೆಸರು ಹೇಳಿಕೊಂಡು ರಾಜಕಾರಣ ಮಾಡುವುದರಲ್ಲೇ ನಂಬಿಕೆ ಜಾಸ್ತಿ ಎಂದು ತಕ್ಕ ತಿರುಗೇಟು ನೀಡಿದ್ದಾರೆ.

ಮಹಾತ್ಮಾ ಗಾಂಧೀಜಿ ತಂದೆ ಯಾರು? ಸರ್ದಾರ್ ಪಟೇಲ್ ತಂದೆ ಯಾರು? ಅವರ ಪತ್ನಿ ಹೆಸರೇನು ಇಂತಹ ಪ್ರಶ್ನೆಗಳೆಲ್ಲಾ ಪ್ರಸ್ತುತವೇ? ಇದು ಕಾಂಗ್ರೆಸ್ ನ ದುರ್ಗತಿ ಎಂದು ಜೇಟ್ಲಿ ವ್ಯಂಗ್ಯ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ