ನವದೆಹಲಿ : ಗಂಗೆ ಪಾಪ ತೊಳೆಯುವ ಜತೆ ಕೊರೊನಾಗೆ ಮದ್ದಾಗಬಲ್ಲದು ಬನಾರಸ್ ಹಿಂದೂ ವಿವಿ ಪ್ರೊ.ಯು.ಕೆ.ಚೌದರಿ ವಾದ ಮಂಡಿಸುತ್ತಿದ್ದಾರೆ.
‘ಗಂಗಾನದಿ ಹಿಮಾಲಯದ ಎತ್ತರದ ಪ್ರದೇಶದಲ್ಲಿ ಹುಟ್ಟುತ್ತದೆ. ಯಮುನಾ, ಸೋನ್ ನದಿಗಿಂತ ಎತ್ತರ ಪ್ರದೇಶದಲ್ಲಿ ಹುಟ್ಟುತ್ತೆ. ಗಂಗಾ ನದಿ ನೀರು ಶುದ್ಧ, ಉತ್ತಮ ಗುಣಮಟ್ಟದಲ್ಲಿ ಇರುತ್ತದೆ. ಗಂಗೆಯ ನದಿಪಾತದ ಉದ್ದಕ್ಕೂ ಔಷಧ ಗಿಡಮೂಲಿಕೆಗಳಿವೆ. ಗಂಗಾ ನದಿಯ ನೀರಿನಲ್ಲಿ ಬ್ಯಾಕ್ಟೀರಿಯಾ ಭಕ್ಷಕ ಅಂಶವಿದೆ. ಹೀಗಾಗಿ ಕೊರೊನಾ ಸೋಂಕಿಗೆ ಮದ್ದಾಗಬಲ್ಲದು ಎಂದು ಅವರು ವಾದಿಸುತ್ತಿದ್ದಾರೆ.