ಅಪ್ರಾಪ್ತ ಬಾಲಕಿ ಮೇಲೆ ರೇಪ್ ಎಸಗಿ ಬ್ಲ್ಯಾಕ್‌ಮೇಲ್: ಆರೋಪಿ ಅರೆಸ್ಟ್

ಶನಿವಾರ, 2 ಡಿಸೆಂಬರ್ 2023 (10:57 IST)
ಬಾಲಕಿಯೊಂದಿಗೆ ಗೆಳೆತನ ಸಂಪಾದಿಸಿದ ಯುವಕ ಕೆಲ ದಿನಗಳಿಂದ ಆಕೆಯೊಂದಿಗೆ ಮಾತನಾಡುತ್ತಾ ಗೆಳೆತನವನ್ನು ಗಟ್ಟಿಗೊಳಿಸಿದ್ದ. ಸಮಯಾವಕಾಶವನ್ನು ಪಡೆದು ಬಾಲಕಿ ಏಕಾಂಗಿಯಾಗಿದ್ದಾಗ ಆಕೆಯ ಮೇಲೆ ಅತ್ಯಾಚಾರವೆಸಗಿ, ಅತ್ಯಾಚಾರವೆಸಗುತ್ತಿರುವ ದೃಶ್ಯವನ್ನು ವಿಡಿಯೋ ಮಾಡಿಟ್ಟುಕೊಂಡು ಯಾರಿಗಾದರೂ ಹೇಳಿದಲ್ಲಿ ವಿಡಿಯೋವನ್ನು ಎಲ್ಲರಿಗೂ ತೋರಿಸುವುದಾಗಿ ಬೆದರಿಸಿ ನಿರಂತರವಾಗಿ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬಾಲಕಿಗೆ ಆಮಿಷಯೊಡ್ಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅದನ್ನು ವಿಡಿಯೋ ಮಾಡಿ ಅದನ್ನು ಇಟ್ಟುಕೊಂಡು ಯಾರಿಗೂ ಹೇಳಬಾರದೆಂದು ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ಬಾಲಕಿ ತನ್ನ ಪೋಷಕರಿಗೆ ತಿಳಿಸಿದ ಹಿನ್ನಲೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿ ಜೈಲಿಗಟ್ಟಲಾಗಿದೆ.
 
ಬಾಲಕಿಯ ಮೇಲೆ ಮಾನಭಂಗ ಎಸಗಿ, ಅದನ್ನು ವಿಡಿಯೋ ಮಾಡಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಲೊಕೊ ಪೈಲೆಟ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ ಘಟನೆ ಕಾನ್ಪುರದಲ್ಲಿ ನಡೆದಿದೆ.
 
ಆರೋಪಿ ಯುವಕ ಹಲವಾರು ಬಾಲಕಿಯರೊಂದಿಗೆ ಇಂತಹ ಕೃತ್ಯ ಎಸಗಿರಬಹುದು ಎನ್ನುವ ಶಂಕೆಯಿರುವ ಹಿನ್ನೆಲೆಯಲ್ಲಿ, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ