ನೀಲಮಣಿ ರಾಜುಗೆ ರಾಜ್ಯಪಾಲೆ ಕಿರಣ್ ಬೇಡಿ ಅಭಿನಂಧನೆ

ಬುಧವಾರ, 1 ನವೆಂಬರ್ 2017 (13:00 IST)
ಕರ್ನಾಟಕ ರಾಜ್ಯದ ಮೊದಲ ಮಹಿಳಾ ಪೊಲೀಸ್ ಮುಖ್ಯಸ್ಥೆಯಾಗಿ ಅಧಿಕಾರ ಸ್ವೀಕರಿಸಿದ ನೀಲಮಣಿ ಎನ್.ರಾಜು ಅವರನ್ನು ಪುದುಚೇರಿಯ ರಾಜ್ಯಪಾಲೆ ಕಿರಣ್ ಬೇಡಿ ಅಭಿನಂಧಿಸಿದ್ದಾರೆ.
ಸಾಮಾಜಿಕ ಅಂತರ್ಜಾಲ ತಾಣವಾದ ಟ್ವಿಟ್ಟರ್‌ನಲ್ಲಿ ಟ್ವಿಟ್ ಸಂದೇಶ ರವಾನಿಸಿದ ಕಿರಣ್ ಬೇಡಿ,  ನೀಲಮಣಿ ರಾಜು ವೃತ್ತಿಪರತೆಯನ್ನು ಪಾಲಿಸಲು ಶಕ್ತಿ ದೊರೆಯಲಿ. ಎಲ್ಲಾ ಸ್ಥರದ ಜನತೆಗೆ ನ್ಯಾಯ ದೊರಕಿಸಿಕೊಡುವಂತೆ ಕಾರ್ಯನಿರ್ವಹಿಸಿ ಎಂದು ಹಾರೈಸಿದ್ದಾರೆ.
 
1983 ಬ್ಯಾಚ್‌ನ ಐಪಿಎಸ್ ಅಧಿಕಾರಿಯಾದ ನೀಲಮಣಿ, ಪೊಲೀಸ್ ಮಹಾನಿರ್ದೇಶಕ ಆರ್‌.ಕೆ.ದತ್ತಾ ತೆರವುಗೊಳಿಸಿರುವ ಸ್ಥಾನವನ್ನು ತುಂಬಿದ್ದಾರೆ.
 
ಪೊಲೀಸ್ ಮಹಾನಿರ್ದಶಕಿ ಸ್ಥಾನವನ್ನು ಯಶಸ್ವಿಯಾಗಿ ನಿಭಾಯಿಸಲು ಪ್ರಯತ್ನಿಸುವುದಾಗಿ ನೀಲಮಣಿ ಎನ್.ರಾಜು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ