ಕೋಲ್ಕತ್ತಾ : ತರಗತಿಗಳು ನಡೆಯುತ್ತಿರುವಾಗ ಶಾಲಾ ಕಟ್ಟಡದ ಚಾವಣಿಯ ಮೇಲೆ ಕಚ್ಚಾ ಬಾಂಬ್ ಸ್ಫೋಟಗೊಂಡ ಘಟನೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ನಡೆದಿದೆ.
ಪಶ್ಚಿಮಬಂಗಾಳದಲ್ಲಿರುವ ಶಾಲೆಯ ಮೂರು ಅಂತಸ್ತಿನ ಕಟ್ಟಡದ ಮೊದಲ ಎರಡು ಮಹಡಿಯಲ್ಲಿರುವ ಕೊಠಡಿಗಳಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಇದ್ದರು. ಆದರೆ ಯಾವುದೇ ಪ್ರಾಣಾಹಾನಿ ಸಂಭವಿಸಿಲ್ಲ.
ಸ್ಫೋಟದ ಶಬ್ದ ಕೇಳಿ ಭಯಭೀತರಾದ ವಿದ್ಯಾರ್ಥಿಗಳು ಶಾಲಾ ಕೊಠಡಿಯನ್ನು ತೊರೆದು ಹೊರಗೆ ಬಂದಿದ್ದಾರೆ. ಶಿಕ್ಷಕರು ಶಾಲೆಯ ಛಾವಣಿ ಮೇಲೆ ಬಾಂಬ್ ಸ್ಪೋಟಗೊಂಡಿರುವುದನ್ನು ಕಂಡು ಪೊಲೀಸರಿಗೆ ತಿಳಿಸಿದ್ದಾರೆ.
ಬರಾಕ್ಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಕಚ್ಚಾ ಬಾಂಬ್ ಸ್ಫೋಟ ಸಂಭವಿಸಿದೆ. ಹತ್ತಿರದ ಕಟ್ಟಡದಿಂದ ಬಾಂಬ್ ಎಸೆದಿರುವುದಾಗಿದೆಯೇ ಅಥವಾ ಅಲ್ಲೇ ಇಟ್ಟು ಏಕಾಏಕಿ ಸ್ಫೋಟಗೊಂಡಿದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಿದರು.
ಘಟನೆ ಸಂಬಂಧಿಸಿ ಬಿಜೆಪಿ ಸಂಸದ ಕಿಡಿಕಾರಿದ್ದು, ಮಮತಾ ಬ್ಯಾನರ್ಜಿಯವರ ಆಡಳಿತದಲ್ಲಿ ಶಾಲಾ ಮಕ್ಕಳು ಸುರಕ್ಷಿತವಾಗಿಲ್ಲ. ಪಶ್ಚಿಮ ಬಂಗಾಳದಾದ್ಯಂತ ಮನೆಗಳು ಮತ್ತು ಪಕ್ಷದ ಕಚೇರಿಗಳಲ್ಲಿ ಬಾಂಬ್ಗಳು ಪತ್ತೆಯಾಗಿವೆ.