ಭಾರತ-ಆಸ್ಟ್ರೇಲಿಯಾ ಟೆಸ್ಟ್: ಪೂಜಾರಗೆ 100 ನೇ ಪಂದ್ಯ, ಟಾಸ್ ಗೆದ್ದ ಆಸೀಸ್

ಶುಕ್ರವಾರ, 17 ಫೆಬ್ರವರಿ 2023 (09:07 IST)
Photo Courtesy: Twitter
ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಆಸೀಸ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ.

ಇಂದಿನ ಪಂದ್ಯ ಟೀಂ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಪಾಲಿಗೆ ವಿಶೇಷವಾಗಿದೆ. ಇದು ಅವರ ಟೆಸ್ಟ್ ವೃತ್ತಿ ಜೀವನದ 100 ನೇ ಪಂದ್ಯ.

ಭಾರತ ತಂಡದಲ್ಲಿ ಈ ಪಂದ್ಯಕ್ಕೆ ಒಂದು ಬದಲಾವಣೆಯಾಗಿದೆ. ನಿರೀಕ್ಷೆಯಂತೇ ಫಿಟ್ ಆದ ಶ್ರೇಯಸ್ ಅಯ್ಯರ್ ತಂಡಕ್ಕೆ ಪುನರಾಗಮನ ಮಾಡಿದ್ದು, ಸೂರ್ಯಕುಮಾರ್ ಯಾದವ್ ಹೊರಗುಳಿದಿದ್ದಾರೆ. ಇನ್ನು ಆಸ್ಟ್ರೇಲಿಯಾ ತಂಡದಲ್ಲಿ ಎರಡು ಬದಲಾವಣೆಯಾಗಿದ್ದು, ಟ್ರಾವಿಸ್ ಹೆಡ್ ಮತ್ತು ಮ್ಯಾಥ್ಯೂ ಕುನ್ನೆಮನ್ ಡೆಬ್ಯೂಟ್ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ