ಶಿಬಿರದಲ್ಲಿ ಕಾಂಡೋಮ್, ಗರ್ಭ ನಿರೋಧಕ ಮಾತ್ರೆ ಪತ್ತೆ

ಶುಕ್ರವಾರ, 28 ಏಪ್ರಿಲ್ 2023 (07:54 IST)
ರಾಯ್ಪುರ : ಓಡಿಶಾ-ಛತ್ತೀಸ್ಗಢ ಗಡಿಯಲ್ಲಿ ನಕ್ಸಲರೊಂದಿಗೆ ನಡೆದ ಗುಂಡಿನ ಚಕಮಕಿಯ ವೇಳೆ ಪೊಲೀಸರು ನಕ್ಸಲರ ಅಡಗುತಾಣದಿಂದ ಕಾಂಡೋಮ್ಗಳು, ಗರ್ಭ ನಿರೋಧಕ ಮಾತ್ರೆ ಹಾಗೂ ಗರ್ಭಧಾರಣೆಯ ಪರೀಕ್ಷಾ ಕಿಟ್ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
 
ಛತ್ತೀಸ್ಗಢದ ಗಡಿಯಲ್ಲಿರುವ ನಬರಂಗಪುರ ಜಿಲ್ಲೆಯ ರಾಯ್ಘರ್ ಪ್ರದೇಶದಲ್ಲಿ ಯೋಧರು ನಕ್ಸಲರ ವಿರೋಧಿ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ನಕ್ಸಲರ ಶಿಬಿರದಲ್ಲಿದ್ದ ಅಪಾರ ಪ್ರಮಾಣದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ