ಕುಟುಂಬ ರಾಜಕಾರಣದಿಂದ ದೇಶದ ಅಭಿವೃದ್ಧಿಲಾಭ ಇಲ್ಲ: ನರೇಂದ್ರ ಮೋದಿ
ಸೋಮವಾರ, 15 ಆಗಸ್ಟ್ 2022 (12:40 IST)
ನವದೆಹಲಿ : ರಾಜಕೀಯದಲ್ಲಿ ಕುಟುಂಬ ರಾಜಕೀಯ ಸರಿಯಲ್ಲ. ಇದರಿಂದ ಕುಟುಂಬದ ಅಭಿವೃದ್ಧಿಯಾಗುತ್ತದೆ.
ದೇಶದ ಅಭಿವೃದ್ಧಿಗೆ ಕುಟುಂಬ ರಾಜಕಾರಣದಿಂದ ಲಾಭ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಕೆಂಪುಕೋಟೆಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಮೂರು ದಿನಗಳಿಂದ ಹರ್ ಘರ್ ತಿರಂಗ ಅಭಿಯಾನಕ್ಕೆ ಬೆಂಬಲ ಸಿಕ್ಕಿದೆ.
ಜನತಾ ಕರ್ಫ್ಯೂ ನಲ್ಲಿ ಮನೆಯಲ್ಲಿ ಕೂರುತ್ತಾರೆ, ದೀಪ ಹಚ್ಚಿ ಬೆಂಬಲ ಕೊಡುತ್ತಾರೆ, ಚಪ್ಪಾಳೆ ತಟ್ಟಿ ಕೊರೊನಾ ವಾರಿಯರ್ಸ್ ಗೆ ಬೆಂಬಲ ನೀಡಿದ್ದಾರೆ. ಸಮಯ ಬಂದಾಗ ಹೊರಗಡೆ ಬಂದು ತಿರಂಗ ಹಿಡಿದು ದೇಶದ ತಾಕತ್ತು ತೋರಿಸಿದ್ದಾರೆ ಎಂದು ಕೊಂಡಾಡಿದರು.
ವಿಶ್ವ ಭಾರತವನ್ನು ಭಿನ್ನವಾಗಿ ನೋಡುತ್ತಿದೆ. 75 ವರ್ಷದ ಪ್ರಯಾಣದ ಫಲವಾಗಿ ಇಂದು ಭಿನ್ನವಾಗಿ ನೋಡುತ್ತೇವೆ. ಭಾರತದ ಮೇಲೆ ನಿರೀಕ್ಷೆಗಳು ಹೆಚ್ಚಿವೆ. ಅವುಗಳನ್ನು ಪೂರ್ತಿ ಮಾಡಲು ಕೆಲಸ ಮಾಡಬೇಕು. ಭಾರತ ಈಗ ಅಮೃತ್ ಕಾಲಕ್ಕೆ ಪ್ರವೇಶ ಮಾಡುತ್ತಿದೆ. ಮುಂದಿನ 25 ವರ್ಷ ಮಹತ್ವದ್ದಾಗಿದೆ. 130 ಕೋಟಿ ಜನರ ಕನಸನ್ನು ನಾನು ಎದುರು ನೋಡುತ್ತಿದ್ದೇನೆ ಎಂದು ತಿಳಿಸಿದರು.