ಕಳ್ಳತನದ ಆರೋಪಕ್ಕೆ ಹೆದರಿದ ದಂಪತಿ ರೈಲಿನಲ್ಲಿ ಮಾಡಿದ್ದೇನು ಗೊತ್ತಾ?

ಬುಧವಾರ, 22 ಆಗಸ್ಟ್ 2018 (14:51 IST)
ನಾಗ್ಪುರ: ಕಳ್ಳತನದ ಆರೋಪಕ್ಕೆ ಅಂಜಿ ಗಂಡ-ಹೆಂಡತಿ ಇಬ್ಬರೂ ಸಿಹಿತಿಂಡಿಯಲ್ಲಿ ವಿಷ ಬೆರೆಸಿಕೊಂಡು ತಿಂದ ಘಟನೆಯೊಂದು ನಡೆದಿದೆ.

ಕನ್ಯಾಕುಮಾರಿ ಜಿಲ್ಲೆಯ ಅಂಜುಗ್ರಾಮಂನಲ್ಲಿ ವಾಸವಿರುವ ರಾಜ್‌ಕುಮಾರ್‌ ಆರ್ಮುಗಂ(46) ಹಾಗೂ ಪತ್ನಿ ಸಿವಸೆಲ್ವಿ(38) ಮೇಲೆ ವಂಚನೆ, ಕಳ್ಳತನ ಆರೋಪ ಮಾಡಲಾಗಿತ್ತು. ಈ ಸಂಬಂಧ ಅಲ್ಲಿನ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸಿಜೆ ಸುಭಾಷ್‌ ಪಿಳ್ಳೈ ಎಂಬವರು ರಾಜ್‌ಕುಮಾರ್‌ ಆರ್ಮುಗಂ ದಂಪತಿ ನೆರೆ ಮನೆಯ ವೈದ್ಯರು ಹಾಗೂ ಇನ್ನಿತರ ಬಳಿಯಿಂದ ಹಣ ಪಡೆದು ವಂಚಿಸಿದ್ದಾರೆ ಎಂದು ದೂರು ನೀಡಿದ್ದರು.


ಕಳ್ಳತನದ ಆರೋಪದಲ್ಲಿ ಪೊಲೀಸರ ವಿಚಾರಣೆ ಇತ್ಯಾದಿ ಪ್ರಕ್ರಿಯೆಗೆ ಹೆದರಿ ದಂಪತಿ ರೈಲಿನಲ್ಲಿ ಪ್ರಯಾಣಿಸುವಾಗ ಸಿಹಿತಿಂಡಿಗೆ ವಿಷ ಬೆರೆಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ವೆಲ್ಲೂರಿನಿಂದ ವಾರಾಣಸಿಗೆ ಪ್ರಯಾಣಿಸುತ್ತಿದ್ದ ದಂಪತಿಗಳು, 2.5ಕೋಟಿ ರೂ. ನಗದು, 10-12ಕೆಜಿ ಚಿನ್ನವನ್ನು ಕಳ್ಳತನ ಮಾಡಿ ಪರಾರಿಯಾಗುತ್ತಿದ್ದಾರೆ ಎಂದು ರೈಲ್ವೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಈ ಸಂಬಂಧ ನಾಗ್ಪುರ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಪೊಲೀಸರು ರೈಲು ಹತ್ತಿದ್ದು, ದಂಪತಿಯನ್ನು ವಿಚಾರಣೆ ನಡೆಸಿದ್ದಾರೆ. ಅಲ್ಲದೆ ಬ್ಯಾಗ್‌ ಹಾಗೂ ವಸ್ತುಗಳನ್ನು ತಪಾಸಣೆ ನಡೆಸಿದ್ದಾರೆ.

ಆದರೆ ದಂಪತಿಯ ಲಗೇಜ್‌ನಲ್ಲಿ ಕಳ್ಳತನದ ಯಾವುದೇ ವಸ್ತುಗಳು ಸಿಕ್ಕಿಲ್ಲ. ಇಷ್ಟಾಗಿಯೂ ದಂಪತಿ ಮೇಲೆ ಪೊಲೀಸರು ನಿಗಾ ಇರಿಸಿದ್ದರು. ಇದರಿಂದ ತೀವ್ರ ಮನ ನೊಂದ ದಂಪತಿಗಳು, ಸಿಹಿತಿಂಡಿಯಲ್ಲಿ ವಿಷ ಬೆರೆಸಿ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ