ಚಹಾಕ್ಕಾಗಿ ಆಹ್ವಾನಿಸಿ ಕೊನೆಗೆ ಮಹಿಳೆಗೆ ಮಾಡಿದ್ದೇನು ಗೊತ್ತಾ?

ಶುಕ್ರವಾರ, 27 ನವೆಂಬರ್ 2020 (05:33 IST)
ರಾಯ್ ಪುರ : ನಾಲ್ವರು ಸೇರಿ ಮಹಿಳೆಯೊಬ್ಬಳನ್ನು ಅಪಹರಿಸಿ ಮಾನಭಂಗ ಎಸಗಿ ಬೇರೆಯವರಿಗೆ ಮಾರಾಟ ಮಾಡಿದ ಘಟನೆ ಹರಿಯಾಣದಲ್ಲಿ ನಡೆದಿದೆ.

ಮಹಿಳೆಗೆ ಪರಿಚಯವಿರುವ ಆರೋಪಿ ಆಕೆಯನ್ನು ಚಹಾಕ್ಕಾಗಿ ಆಹ್ವಾನಿಸಿ ಅದಕ್ಕೆ ಮಾದಕ ದ್ರವ್ಯ ಮಿಕ್ಸ್ ಮಾಡಿ ಕುಡಿಸಿದ್ದಾನೆ. ತನ್ನ 8 ವರ್ಷದ ಮಗುವಿನ ಜೊತೆ ಮನೆಗೆ ಬಂದ ಆಕೆಗೆ ಪ್ರಜ್ಞೆ ತಪ್ಪಿದೆ. ಬಳಿಕ ಎಚ್ಚರವಾದ ಅವಳಿಗೆ ಆರೋಪಿ ಮತ್ತು ಆತನ ಸ್ನೇಹಿತರು ಸೇರಿ ಮಗುವನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿ ಮಾನಭಂಗ ಎಸಗಿ ಬೇರೆಯವರಿಗೆ ಮಾರಾಟ ಮಾಡಿದ್ದಾರೆ. 

ಅಲ್ಲಿಂದ ಹೇಗೋ  ತಪ್ಪಿಸಿಕೊಂಡು ಬಂದ ಮಹಿಳೆ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾಳೆ. ಮಹಿಳೆಯ ದೂರಿನ ಆಧಾರದ ಮೇಲೆ ಪೊಲೀಸರು ನಾಲ್ವರನ್ನು ಬಂಧಿಸಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ