ಪ್ರೀತಿಸಿ ಮೋಸಮಾಡಿದವನಿಗೆ ಯುವತಿ ಮಾಡಿದ್ದೇನು ಗೊತ್ತಾ?

ಗುರುವಾರ, 7 ಡಿಸೆಂಬರ್ 2023 (14:43 IST)
ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಲೆಕ್ಚರರ್ ಆಗಿ ಕೆಲಸ ಮಾಡುತ್ತಿರುವ ವೆಕಟರಮಣ ಮತ್ತು ಆರೋಪಿ ಸೌಜನ್ಯ  ಕಳೆದ ಕೆಲ ವರ್ಷಗಳಿಂದ ಪರಷ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದರೆ ಆತ ಇತ್ತೀಚಿಗೆ ಬೇರೆ ಯುವತಿಯೊಂದಿಗೆ ವಿವಾಹವಾಗಿದ್ದ. ಇದರಿಂದ ಅಸಮಾಧಾನಗೊಂಡಿದ್ದ ಸೌಜನ್ಯ ಪ್ರತೀಕಾರದ ಉದ್ದೇಶದಿಂದ ಆ್ಯಸಿಡ್ ಎರಚಿದ್ದಾಳೆ.  ದಾಳಿಯ ಸಂದರ್ಭದಲ್ಲಿ ಆಕೆ ಬುರ್ಖಾ ಧರಿಸಿದ್ದಳು ಎನ್ನಲಾಗುತ್ತಿದೆ. 
 
ಪ್ರೀತಿಯ ನಾಟಕವಾಡಿ ವಿವಾಹವಾಗಲು ಒಪ್ಪದ ಉಪನ್ಯಾಸಕನ ಮೇಲೆ ಯುವತಿಯೊಬ್ಬಳು ಆ್ಯಸಿಡ್ ಎರಚಿದ ಘಟನೆ  ನೆರೆಯ ಆಂಧ್ರದಲ್ಲಿ ನಡೆದಿದೆ. 
 
ಆರೋಪಿ ಯುವತಿಯನ್ನು ಸೌಜನ್ಯಾ ಎಂದು ಗುರುತಿಸಲಾಗಿದ್ದು, ಈಕೆ ಆಂಧ್ರ ವಿಶ್ವವಿದ್ಯಾನಿಲಯದಲ್ಲಿ  ಸ್ನಾತಕೋತ್ತರ ಪದವಿ ಅಭ್ಯಸಿಸುತ್ತಿದ್ದಾಳೆ. 
 
ಆದರೆ ಆ್ಯಸಿಡ್ ಎರಟುವಾಗ ವೆಂಕಟರಮಣ ಆಕೆಯ ಬುರ್ಖಾವನ್ನು ಎಳೆದು ಗುರುತು ಹಿಡಿದಿದ್ದಾನೆ. ಘಟನೆಯಲ್ಲಿ ಆಕೆಗೂ ಸುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ