ಆಕೆಯ ನಗ್ನ ಭಾವಚಿತ್ರಗಳು ಮತ್ತು ವಿಡಿಯೋಗಳು ಅಶ್ಲೀಲ ವೆಬ್ಸೈಟ್‌ನಲ್ಲಿ ಪ್ರಸಾರವಾಗುತ್ತಿವೆ ಎಂಬುದನ್ನು ತಿಳಿಯಲು ಆಕೆಗೆ ಹೆಚ್ಚು ದಿನ ಬೇಕಾಗಲಿಲ್ಲ. ಇದೀಗ ಮಾಜಿ ಪ್ರೇಮಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತು ಯುವತಿಯ ಕುಟುಂಬ ಪೊಲೀಸರಿಗೆ ಮಾಹಿತಿ ನೀಡಿತು. ಇತ್ತೀಚಿಗೆ ಆಕೆಯಿಂದ ದೂರವಾಗಿದ್ದ ಪ್ರೇಮಿಯೇ ಇದನ್ನೆಲ್ಲ ಮಾಡುತ್ತಿದ್ದಾನೆಂದು ಒಂದೇ ದಿನದಲ್ಲಿ ಪೊಲೀಸರು ಪತ್ತೆ ಹಚ್ಚಿದರು. ಯುವತಿ ತನ್ನ ಮನೆಯಲ್ಲಿ ಬಟ್ಟೆ ಬದಲಾಯಿಸುತ್ತಿದ್ದಾಗ ಆಕೆಗೆ ಅರಿವಿಲ್ಲದೇ ಆತ ಪೋಟೋಗಳನ್ನು ಕ್ಲಿಕ್ಕಿಸಿದ್ದ ಮತ್ತು ಹುಡುಗಿಯ ಮಾನ ಹರಾಜು ಹಾಕುತ್ತೇನೆಂದು ಯುವತಿಯ ಕುಟುಂಬಕ್ಕೆ ಬೆದರಿಕೆ ಹಾಕಿದ್ದ. ಆರೋಪಿ ಈಗ ಕಂಬಿಯ ಹಿಂದಿದ್ದಾನೆ.