ಶಬರಿಮಲೆಗೆ ಭೇಟಿ ನೀಡುವ ಮೊದಲ ರಾಷ್ಟ್ರಪತಿಯಾಗಲಿದ್ದಾರೆ ದ್ರೌ‍ಪದಿ ಮುರ್ಮು, ಪಾದಯಾತ್ರೆ ಮೂಲಕ ಭೇಟಿ

Sampriya

ಮಂಗಳವಾರ, 6 ಮೇ 2025 (16:32 IST)
ಕೇರಳದ ಹೆಸರಾಂತ ಶಬರಿಮಲೆ ಶ್ರೀ ಅಯ್ಯಪ್ಪ ದೇವಸ್ಥಾನಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇದೇ 19ರಂದು ಭೇಟಿ ನೀಡಲಿದ್ದಾರೆ. ಈ ಮೂಲ ಭಾರತದ ಮೊದಲ ಹಾಲಿ ರಾಷ್ಟ್ರಪತಿಯೊಬ್ಬರು ಶಮರಿಮಲೆಗೆ ಭೇಟಿ ನೀಡಿ, ಹೊಸ ಇತಿಹಾಸ ನಿರ್ಮಿಲಸಿದ್ದಾರೆ.

ದೇಗುಲವನ್ನು ನಿರ್ವಹಿಸುವ ತಿರುವಾಂಕೂರು ದೇವಸ್ವಂ ಬೋರ್ಡ್ ಮುರ್ಮು ಅವರ ಭೇಟಿಯನ್ನು ದೃಢಪಡಿಸಿದೆ. ಇದು ದೇವಾಲಯ ಮತ್ತು ರಾಷ್ಟ್ರಕ್ಕೆ ಒಂದು ಹೆಗ್ಗುರುತು ಕ್ಷಣ ಎಂದು ಕರೆದಿದೆ.

ಪವಿತ್ರ ದೇಗುಲಕ್ಕೆ ರಾಷ್ಟ್ರಪತಿಗಳ ಭೇಟಿ ಕೇರಳಕ್ಕೆ ಅವರ ಎರಡು ದಿನಗಳ ಭೇಟಿಯ ಭಾಗವಾಗಿದೆ. ಅವರು ಮೇ 18 ರಂದು ಕೇರಳಕ್ಕೆ ಆಗಮಿಸಿದ ನಂತರ ಕೊಟ್ಟಾಯಂ ಜಿಲ್ಲೆಯ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ನಿರ್ಧರಿಸಿದ್ದಾರೆ.

ಮರುದಿನ ಬೆಳಿಗ್ಗೆ, ಅವರು ದೇವಸ್ಥಾನದ ಬಳಿಯಿರುವ ನಿಲಕ್ಕಲ್ ಹೆಲಿಪ್ಯಾಡ್‌ಗೆ ಪ್ರಯಾಣಿಸುತ್ತಾರೆ ಮತ್ತು ಪಂಪಾ ಮೂಲ ಶಿಬಿರಕ್ಕೆ ತೆರಳುತ್ತಾರೆ. ಸಾಂಪ್ರದಾಯಿಕ ಯಾತ್ರಾರ್ಥಿಗಳಂತೆ 4.25-ಕಿಮೀ  ನಡೆದ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.  

"ರಾಷ್ಟ್ರಪತಿಯೊಬ್ಬರು ಶಬರಿಮಲೆ ದೇಗುಲಕ್ಕೆ ಭೇಟಿ ನೀಡಲು ಇದೇ ಮೊದಲ ಬಾರಿಗೆ ನಿರ್ಧರಿಸಿದ್ದಾರೆ.  ಎಸ್‌ಪಿಜಿ ನಿರ್ಧರದಂತೆ ಅವರ ಪಾದಯಾತ್ರೆ ನಡೆಯಲಿದೆ. ನಾವು ಅವರ ನಿರ್ದೇಶನವನ್ನು ಪಾಲಿಸುತ್ತೇವೆ" ಎಂದು ತಿರುವಾಂಕೂರು ದೇವಸ್ವಂ ಮಂಡಳಿಯ ಅಧ್ಯಕ್ಷ ಪಿಎಸ್ ಪ್ರಶಾಂತ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ