ಭಾಗಲ್ಪುರದ ಸುಲ್ತಂಗಂಜ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮದುವೆಯ ಹಿಂದಿನ ರಾತ್ರಿ ಖುಷಿಯಲ್ಲಿ ವರ ಮದ್ಯ ಸೇವಿಸಿದ್ದ. ಆದರೆ ಮರುದಿನ ಮದ್ಯದ ಅಮಲಿನಲ್ಲಿ ತನ್ನ ಮದುವೆಯಿದೆ ಎಂಬುದನ್ನ ಮರೆತು ಮದುವೆಗೆ ಗೈರಾಗಿದ್ದಾನೆ.
ಮದುವೆ ಸ್ಥಳದಲ್ಲಿ ವಧು ಮತ್ತು ಆಕೆಯ ಕುಟುಂಬದವರು ವರನಿಗಾಗಿ ಕಾಯುತ್ತಿದ್ದರೂ ಆತ ಬಂದಿರಲಿಲ್ಲ. ಅದಾದ ಒಂದು ದಿನದ ನಂತರ ವರನಿಗೆ ಪ್ರಜ್ಞೆ ಬಂದು ವಧುವಿನ ಮನೆಗೆ ಬಂದಿದ್ದಾನೆ. ಈ ವೇಳೆ ವಧು ನನಗೆ ನೀನು ಬೇಡ ಎಂದು ಮದುವೆಯಾಗಲು ನಿರಾಕರಿಸಿದ್ದಾಳೆ.
ಅಷ್ಟೇ ಅಲ್ಲದೇ ತನ್ನ ಜವಾಬ್ದಾರಿಯನ್ನು ಅರ್ಥ ಮಾಡಿಕೊಳ್ಳದ ವ್ಯಕ್ತಿಯೊಂದಿಗೆ ಜೀವನ ನಡೆಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾಳೆ. ವಧುವಿನ ಮನೆಯವರು ಕೂಡ ವರನ ಕುಟುಂಬಕ್ಕೆ ಮದುವೆಯ ವ್ಯವಸ್ಥೆಗೆ ಖರ್ಚು ಮಾಡಿದ ಹಣವನ್ನು ಹಿಂದಿರುಗಿಸುವಂತೆ ಒತ್ತಾಯಿಸಿದ್ದಾರೆ.