ನವದೆಹಲಿ: ಕೇಂದ್ರ ಸರ್ಕಾರ ಕಾರ್ಮಿಕರ ಸಂಕಷ್ಟಕ್ಕೆ ನೆರವಾಗಲು ಇ ಶ್ರಮ್ ಎನ್ನುವ ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದ್ದು ಈ ಯೋಜನೆಯಡಿಯಲ್ಲಿ ಪ್ರತೀ ತಿಂಗಳು 1,000 ರೂ. ನಿಮ್ಮ ಖಾತೆಗೆ ಬರುವಂತೆ ಮಾಡಬಹುದು. ಅದು ಹೇಗೆ ಇಲ್ಲಿದೆ ವಿವರ.
ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ 2021 ರಲ್ಲಿ ಅಸಂಘಟಿತ ವಲಯದ ಕಾರ್ಮಿಕರ ರಾಷ್ಟ್ರೀಯ ಡೇಟಾಬೇಸ್ ಇ-ಶ್ರಮ್ ಪೋರ್ಟಲ್ ಆರಂಭಿಸಿತು. ಆಧಾರ್ ಲಿಂಕ್ ಮಾಡಿದ ಕಾರ್ಮಿಕರ ರಾಷ್ಟ್ರೀಯ ಡೇಟಾಬೇಸ್ ರಚಿಸುವುದು ಈ ಪೋರ್ಟಲ್ ಮುಖ್ಯ ಉದ್ದೇಶವಾಗಿದೆ. ಇದರ ಪ್ರಯೋಜನವನ್ನು ವಲಸೆ ಕಾರ್ಮಿಕರು, ಗೃಹ ಕಾರ್ಮಿಕರು ಸೇರಿದಂತೆ ಅಸಂಘಟಿತ ವಲಯದ ಎಲ್ಲಾ ಕಾರ್ಮಿಕರು ಪಡೆಯಬಹುದಾಗಿದೆ.
ಕಾರ್ಮಿಕರು ಇ-ಶ್ರಮ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಕಾರ್ಡ್ ಇದ್ದಲ್ಲಿ ಕಾರ್ಮಿಕರಿಗೆ 60 ವರ್ಷ ದಾಟಿದ ಬಳಿಕ ಪಿಂಚಣಿ, ಮರಣ ವಿಮೆ ಮತ್ತು ಅಂಗವೈಕಲ್ಯವಾದರೆ ಆರ್ಥಿಕ ಸಹಾಯ ದೊರೆಯುತ್ತದೆ. ಇದಕ್ಕಾಗಿ ಪೋರ್ಟಲ್ ನಲ್ಲಿ ಹೆಸರು ನೊಂದಾಯಿಸಿಕೊಳ್ಳಬೇಕಾಗುತ್ತದೆ. ಇಟ್ಟಿಗೆ ಗೂಡು ಕೆಲಸಗಾರರು, ಮೀನುಗಾರರು, ರೇಷ್ಮೆ ಕಾರ್ಮಿಕರು, ಉಪ್ಪು, ಕಟ್ಟಡ ಕಾರ್ಮಿಕರು, ಗೃಹೋಪಯೋಗಿ ಉಪಕರಣಗಳ ಕಾರ್ಮಿಕರು, ಕಾರ್ಖಾನೆಯ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು ಈ ಕಾರ್ಡ್ ಪಡೆಯಲು ಅರ್ಹರಾಗಿತ್ತಾರೆ.
ಕಾರ್ಡ್ ಇದ್ದರೆ ಏನು ಪ್ರಯೋಜನ?
18-59 ವರ್ಷದೊಳಗಿನ ಕಾರ್ಮಿಕರು ಇ-ಶ್ರಮ್ ಕಾರ್ಡ್ ಪಡೆಯಲು ಅರ್ಹರಾಗಿತ್ತಾರೆ. ಭಾರತದ ಪೌರತ್ವ ಹೊಂದಿದವರಾಗಿರಬೇಕು. ಕಾರ್ಡ್ ದಾರರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 1,000 ರೂ. ಹಣ ಜಮೆ ಆಗುತ್ತದೆ. ಅಲ್ಲದೆ, ಈ ಕಾರ್ಡ್ ಇದ್ದಲ್ಲಿ 2 ಲಕ್ಷ ರೂ.ವರೆಗಿನ ವಿಮೆ ಪಡೆಯಬಹದು. 60 ವರ್ಷ ಮೇಲ್ಪಟ್ಟ ಕಾರ್ಮಿಕರಿಗೆ ಅಟಲ್ ಪಿಂಚಣಿ, ಅಪಘಾತ ವಿಮೆ ಜೊತೆಗೆ ತಿಂಗಳಿಗೆ 3,000 ರೂ. ಲಭ್ಯವಾಗುತ್ತದೆ. ಇ-ಶ್ರಮ್ ವೆಬ್ ಸೈಟ್ ಮೂಲಕ ಆನ್ ಲೈನ್ ಮಾರ್ಗವಾಗಿ ಅರ್ಜಿ ಸಲ್ಲಿಸಬಹುದು.