ಕಿಸಾನ್ ಸಮ್ಮಾನ್ ಯೋಜನೆ ಪಡೆಯಲು ಇಲ್ಲಿ ಕೆವೈಸಿ ಮಾಡಿಸಿಕೊಳ್ಳಬಹುದು

Krishnaveni K

ಶುಕ್ರವಾರ, 16 ಆಗಸ್ಟ್ 2024 (10:18 IST)
ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಪಿಎಂ ಕಿಸಾನ್ ಸಮ್ಮಾನ ಯೋಜನೆಯ 18 ನೇ ಕಂತಿನ ಹಣ ಪಡೆಯಲು ಕೆವೈಸಿ ಮಾಡಿಸಿಕೊಳ್ಳಬೇಕೆಂದರೆ ಎಲ್ಲಿಗೆ ಭೇಟಿ ನೀಡಬೇಕು ನೋಡಿ.

ಕಿಸಾನ್ ಸಮ್ಮಾನ್ ಯೋಜನೆಯಡಿ ದೇಶದ ರೈತರ ಖಾತೆಗೆ ಕೇಂದ್ರ ಸರ್ಕಾರ 6 ಸಾವಿರ ರೂ. ಹಣ ಜಮೆ ಮಾಡುತ್ತಿದೆ. ಈಗಾಗಲೇ 17 ಕಂತಿನ ಹಣ ಪಾವತಿಯಾಗಿದ್ದು ಒಟ್ಟು 34 ಸಾವಿರ ರೂ. ಜಮೆ ಮಾಡಲಾಗಿದೆ. ಮಧ್ಯವರ್ತಿಗಳಿಲ್ಲದೇ ನೇರವಾಗಿ ರೈತರ ಖಾತೆಗೇ ಹಣ ವರ್ಗಾವಣೆ ಮಾಡಲಾಗುತ್ತಿದೆ.

ಪ್ರತೀ ವರ್ಷ ಮೂರು ಕಂತುಗಳಲ್ಲಾಗಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣವನ್ನು ರೈತರ ಖಾತೆಗೆ ಹಾಕಲಾಗುತ್ತಿದೆ. ಇದರಲ್ಲಿ ಮೊದಲನೇ ಕಂತನ್ನು ಏಪ್ರಿಲ್ ನಿಂದ ಜುಲೈ ಅವಧಿಯಲ್ಲಿ ನೀಡಲಾಗಿದೆ. ಇದೀಗ ಎರಡನೇ ಕಂತಿನ ಹಣವನ್ನು ಆಗಸ್ಟ್ ನಿಂದ ನವಂಬರ್ ಒಳಗಾಗಿ ಹಾಕಲಾಗುತ್ತದೆ.

ಇದಕ್ಕೆ ಮೊದಲು ನಿಮ್ಮ ಕೆವೈಸಿ ಅಪ್ ಡೇಟ್ ಮಾಡಿಕೊಳ್ಳಬೇಕಾಗುತ್ತದೆ. ಇಲ್ಲದೇ ಹೋದರೆ ಖಾತೆಗೆ ಹಣ ಬಾರದು. ಹೀಗಾಗಿ ತಕ್ಷಣವೇ ಪಿಎಂ ಕಿಸಾನ್ ಯೋಜನೆಯ ಖಾತೆಗೆ ವಿವಿಧ 3 ವಿಧಾನಗಳ ಆಧಾರಿತ ಇ-ಕೆವೈಸಿ ಅಪ್ ಡೇಟ್ ಮಾಡಿಸಲು ನಿಮ್ಮ ಹತ್ತಿರದ ನಾಗರಿಕ ಸೇವಾ ಕೇಂದ್ರಗಳಿಗೆ ಅಥವಾ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅಪ್ ಡೇಟ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ