ನೈಟ್ರೋಜನ್‌ ಗ್ಯಾಸ್‌ ಬಳಸಿ ಮರಣದಂಡನೆ

geetha

ಶನಿವಾರ, 27 ಜನವರಿ 2024 (18:23 IST)
ಅಮೆರಿಕ : ಜ.25 ಗುರುವಾರದಂದು ಸ್ಮಿತ್‌ ಗೆ ಮರಣ ದಂಡನೆ ನೀಡಲಾಗಿತ್ತು. 22 ನಿಮಿಷಗಳ ಕಾಲ ಆತನಿಗೆ ನೈಟ್ರೋಜನ್‌ ಹೈಪೊಕ್ಸಿಯಾ ಎಂಬ ಅನಿಲವನ್ನು ಮಾಸ್ಕ್‌ ಮೂಲಕ ಊಡಿಸಲಾಗಿತ್ತು.  1982 ರಿಂದ ಇದುವರೆಗೂ ಯುಎಸ್‌ ಸರ್ಕಾರವು ಅಪರಾಧಿಗಳನ್ನು ಕೊಲ್ಲಲು ಲೀಥಲ್‌ ಇಂಜೆಕ್ಷನ್‌ ಬಳಕೆ ಮಾಡುತ್ತಿತ್ತು. 

ಇದೇ ಮೊದಲ ಬಾರಿಗೆ ವ್ಯಕ್ತಿಯೊಬ್ಬನಿಗೆ ನೈಟ್ರೋಜನ್‌ ಅನಿಲ ಬಳಸಿ ಮರಣ ದಂಡನೆ ನೀಡಿರುವ ಘಟನೆ ಅಮೆರಿಕದ ಅಲ್ಬಾಮಾ ಪ್ರಾಂತ್ಯದಲ್ಲಿ ನಡೆದಿದೆ. ಕೆನೆತ್‌ ಯುಜಿನಿ ಸ್ಮಿತ್‌ ಎಂಬ  ವ್ಯಕ್ತಿಗೆ ಕೊಲೆ ಆರೋಪದಡಿಯಲ್ಲಿ ಮರಣದಂಡನೆ ವಿಧಿಸಲಾಗಿತ್ತು.  ಈ ರೀತಿಯ ಮರಣ ದಂಡನೆ ಇದೇ ಮೊದಲ ಬಾರಿಗೆ ನಡೆಸಲಾಗುತ್ತಿದ್ದು, ಈ ನಡೆಗೆ ಮಾನವ ಹಕ್ಕು ಹೋರಾಟಗಾರರು ಹಾಗೂ ಮರಣದಂಡನೆ ವಿರೋಧಿ ಸಂಘಟನೆಗಳಿಂದ ಭಾರೀ ಪ್ರತಿರೋಧ ವ್ಯಕ್ತವಾಗಿದೆ. ವಿಶ್ವಸಂಸ್ಥೆ ಕೂಡ ಈ ಕ್ರಿಯೆಯನ್ನು ಅಮಾನವೀಯ ಎಂದು ಕರೆದಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ