ಉಪವಾಸ ಸತ್ಯಾಗ್ರಹಕ್ಕೆ ಮೊದಲು ಭೂರಿ ಭೋಜನ: ಕಾಂಗ್ರೆಸ್ ನೀಡಿದ ಸ್ಪಷ್ಟನೆ ಏನು ಗೊತ್ತಾ?
ಫೋಟೋದಲ್ಲಿ ಅಜಯ್ ಮಾಕೆನ್ ಸೇರಿದಂತೆ ಸತ್ಯಾಗ್ರಹದಲ್ಲಿ ಪಾಲ್ಗೊಂಡ ನಾಯಕರು ಕಾರ್ಯಕ್ರಮಕ್ಕೆ ಮೊದಲು ರೆಸ್ಟೋರೆಂಟ್ ನಲ್ಲಿ ಭರ್ಜರಿ ಉಪಾಹಾರ ಸೇವಿಸುತ್ತಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ.
ಈ ಕುರಿತಾಗಿ ಕಾಂಗ್ರೆಸ್ ಇದೀಗ ಸ್ಪಷ್ಟನೆ ನೀಡಿದ್ದು, ‘ಉಪವಾಸ ಸತ್ಯಾಗ್ರಹ ಸಾಂಕೇತಿಕ ಪ್ರತಿಭಟನೆಯಾಗಿತ್ತು. ಇದು 10 30 ರಿಂದ ಆರಂಭವಾಗಿತ್ತು. ನಾವು 8.30 ರ ಸುಮಾರಿಗೆ ಉಪಾಹಾರ ಸೇವಿಸಿದ್ದೆವು’ ಎಂದು ಕಾಂಗ್ರೆಸ್ ನಾಯಕರು ಸ್ಪಷ್ಟನೆ ನೀಡಿದ್ದಾರೆ. ಆದರೆ ಅವರ ಈ ಸ್ಪಷ್ಟನೆಯೂ ಇದೀಗ ವಿಪಕ್ಷಗಳ ಟೀಕೆಗೆ ಗುರಿಯಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.