ವಿವಾಹಿತ ಮಹಿಳೆಯ ಮೇಲೆ ಗ್ಯಾಂಗ್‌ರೇಪ್: ಆರೋಪಿ ಅರೆಸ್ಟ್

ಮಂಗಳವಾರ, 7 ನವೆಂಬರ್ 2017 (15:15 IST)
ವಿವಾಹಿತ ಮಹಿಳೆಯ ಮೇಲೆ ಗ್ಯಾಂಗ್‌ರೇಪ್ ಎಸಗಿದ ಆರೋಪಿ ಅನಿಲ್ ವಸಂತ ತೊಂಬ್ರೆಯನ್ನು ಪೊಲೀಸರು ಬಂಧಿಸಿದ್ದು, ಇತರ ಆರೋಪಿಗಳ ಬಂಧನಕ್ಕಾಗಿ ಹುಡುಕಾಟ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ವಿವಾಹಿತ ಮಹಿಳೆ ಸಂತೋಷಿ ಮಠ್ ಮನೆಗೆ ತೆರಳಿದ ಆರೋಪಿ ಅನಿಲ್, ಜನ್ಮದಿನಾಚರಣೆಗಾಗಿ ಆಗಮಿಸುವಂತೆ ಕೋರಿದ್ದಾನೆ. 
 
ಗೆಳೆಯನ ಕೋರಿಕೆಯ ಮೇರೆಗೆ ಮನೆಗೆ ಆಗಮಿಸಿದ ಮಹಿಳೆಗೆ ತಂಪು ಪಾನೀಯದಲ್ಲಿ ಮತ್ತು ಬರಿಸುವ ತಂಪು ಪಾನೀಯ ನೀಡಿದ್ದಾರೆ. ತಂಪು ಪಾನೀಯ ಸೇವಿಸಿ ಪ್ರಜ್ಞೆ ಕಳೆದುಕೊಂಡ ಮಹಿಳೆಯ ಮೇಲೆ ಗ್ಯಾಂಗ್‌ರೇಪ್ ಎಸಗಿದ್ದಾರೆ.
 
ಅತ್ಯಾಚಾರವೆಸಗಿದ ನಂತರ ಮಹಿಳೆಯನ್ನು ರಸ್ತೆಯ ಮೇಲೆ ಎಸೆದು ಪರಾರಿಯಾಗಿದ್ದಾರೆ. ರಸ್ತೆಯ ಮೇಲೆ ಬಿದ್ದ ಮಹಿಳೆಯನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ
 
ಮಹಿಳೆಯಿಂದ ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆರೋಪಿ ಅನಿಲ್ ವಸಂತ ತೊಂಬ್ರೆನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಪರಾರಿಯಾಗಿರುವ ಆರೋಪಿಗಳ ಬಂಧನಕ್ಕಾಗಿ ಜಾಲ ಬೀಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ