ಮದ್ಯದ ಬ್ರಾಂಡ್‌ಗಳಿಗೆ ಮಹಿಳೆಯರ ಹೆಸರಿಟ್ರೆ ಮಾರಾಟದಲ್ಲಿ ಹೆಚ್ಚಳ : ಬಿಜೆಪಿ ಸಚಿವ

ಸೋಮವಾರ, 6 ನವೆಂಬರ್ 2017 (14:56 IST)
ಮದ್ಯದ ಬ್ರಾಂಡ್‌ಗಳಿಗೆ ಮಹಿಳೆಯರ ಹೆಸರಿಡಿ, ಆವಾಗ ನೋಡಿ ಹೇಗೆ ಮಾರಾಟವಾಗುತ್ತೆ ಎಂದು ಮಹಾರಾಷ್ಟ್ರ ಸಚಿವ ಗಿರೀಶ್ ಮಹಾಜನ್ ನೀಡಿರುವ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.
ಉತ್ತರ ಮಹಾರಾಷ್ಟ್ರದ ನಂದೂರ್‌ಬರ್ ಜಿಲ್ಲೆಯಲ್ಲಿರುವ ಸಕ್ಕರೆ ಕಾರ್ಖಾನೆಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ  ಮಾತನಾಡಿ, ಮದ್ಯದ ಬಾಟಲಿಗಳಿಗೆ ಮಹಿಳೆಯರ ಹೆಸರಿಟ್ಟಲ್ಲಿ ವೇಗವಾಗಿ ಮಾರಟವಾಗುತ್ತವೆ ಎನ್ನುವ ಸೆಕ್ಸಿ ಹೇಳಿಕೆ ನೀಡಿದ್ದರು.
 
ಒಂದು ಬ್ರ್ಯಾಂಡ್‌ಗೆ ಭಿಂಗಾರಿ, ಮತ್ತೊಂದು ಬ್ರ್ಯಾಂಡ್‌ಗೆ ಬಾಬ್ಬಿ, ತದನಂತರ ಮತ್ತೊಂದು ಬ್ರ್ಯಾಂಡ್‌ಗೆ ಜ್ಯೂಲಿ ಎಂದು ಹೆಸರಿಡಿ ಮದ್ಯ ನೋಡು ನೋಡುತ್ತಲೇ ಮಾರಾಟವಾಗುತ್ತದೆ. ನಾನು ನಿಮಗೆ ನಿಮ್ಮ ಮದ್ಯದ ಬ್ರಾಂಡ್ ಯಾವುದು ಎಂದು ಕೇಳಿದೆ. ಅದಕ್ಕೆ ನೀವು ಮಹಾರಾಜ ಎಂದು ಹೇಳಿದಿರಿ. ಹಾಗಾದ್ರೆ ಹೇಗೆ ಮಾರಟವಾಗುತ್ತದೆ? ಮಹಾರಾಜಾ ಬದಲಿಗೆ ಮಹಾರಾಣಿ ಎಂದು ಹೆಸರಿಸಿ. ಆವಾಗ ನೋಡಿ ಮದ್ಯ ಹೇಗೆ ಮಾರಾಟವಾಗುತ್ತದೆ ಎಂದು ಸಚಿವರು ತಮ್ಮ ಜಾಣತನವನ್ನು ಪ್ರದರ್ಶಿಸಿದ್ದಾರೆ. 
 
ಈ ದಿನಗಳಲ್ಲಿ ಮದ್ಯದ ಬ್ರ್ಯಾಂಡ್‌ಗಳಿಗೆ ಮಹಿಳೆಯರ ಹೆಸರಿಡುವ ಪ್ರವೃತ್ತಿಯುಲ್ಲಿ ಹೆಚ್ಚಳವಾಗುತ್ತಿದೆ.ತಂಬಾಕು ಬ್ರ್ಯಾಂಡ್‌‍ಗಳು ಕೂಡಾ ಕಮಲ್, ವಿಮಲ್, ಸುಮನ್ ಎಂದು ಹೆಸರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
 
ಹೇಳಿಕೆ ವಿವಾದಕ್ಕೆ ತಿರುಗುತ್ತಿದ್ದಂತೆ ನಾನು ಜೋಕ್ ಮಾಡಿದ್ದೆ, ನನಗೆ ಮಹಿಳೆಯರ ಬಗ್ಗೆ ತುಂಬಾ ಗೌರವವಿದೆ ಎಂದು ಸಚಿವ ಗಿರೀಶ್ ಮಹಾಜನ್ ಉಲ್ಟಾ ಹೊಡೆದಿದ್ದಾರೆ.
 
ಸಚಿವರು ಮಹಿಳೆಯರ ಬಗ್ಗೆ ನೀಡಿದ ಹೇಳಿಕೆಯನ್ನು ವಿರೋಧಿಸಿ ಸಾಮಾಜಿಕ ಕಾರ್ಯಕರ್ತರೊಬ್ಬರು ಸಚಿವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ