ವಿಶ್ವ ನಾಯಕರ ಸಾಲಿನಲ್ಲಿ ಈ ವಿಚಾರದಲ್ಲಿ ಪ್ರಧಾನಿ ಮೋದಿಯೇ ನಂ 1

Krishnaveni K

ಸೋಮವಾರ, 15 ಜುಲೈ 2024 (10:24 IST)
ನವದೆಹಲಿ: ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ನರೇಂದ್ರ ಮೋದಿ ಜನಪ್ರಿಯತೆ ಇನ್ನೂ ಕಡಿಮೆಯಾಗಿಲ್ಲ ಎನ್ನುವುದಕ್ಕೆ ಇದೊಂದು ವಿಚಾರ ಸಾಕ್ಷಿಯಾಗಿದೆ. ಮೋದಿ ಈಗ ವಿಶ್ವ ನಾಯಕರ ಸಾಲಿನಲ್ಲಿ ನಂ 1 ಸ್ಥಾನ ಪಡೆದಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ಪ್ರಧಾನಿ ಮೋದಿ ಈಗ ಟ್ವಿಟರ್ ಫಾಲೋವರ್ ಗಳ ಸಂಖ್ಯೆಯಲ್ಲಿ ದಾಖಲೆ ಬರೆದಿದ್ದಾರೆ. ಟ್ವಿಟರ್ ನಲ್ಲಿ ಮೋದಿ ಖಾತೆಗೆ ಈಗ 10 ಕೋಟಿ ಫಾಲೋವರ್ ಗಳು ಸೇರ್ಪಡೆಯಾಗಿದ್ದಾರೆ. ಈ ಮೂಲಕ ಈ ಸಂಖ್ಯೆ ದಾಟಿದ ವಿಶ್ವದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅತೀ ಹೆಚ್ಚು ಟ್ವಿಟರ್ ಫಾಲೋವರ್ ಗಳನ್ನು ಹೊಂದಿರುವ ವಿಶ್ವ ನಾಯಕರ ಪಟ್ಟಿಯಲ್ಲಿ ಮೋದಿ ನಂ.1 ಎನಿಸಿಕೊಂಡಿದ್ದಾರೆ. ಭಾರತದ ರಾಜಕಾರಣಿಗಳ ಪೈಕಿ ಉಳಿದ ಯಾವುದೇ ರಾಜಕಾರಣಿಗಳು ಮೋದಿಯ ಸನಿಹವೂ ಇಲ್ಲ. ರಾಹುಲ್ ಗಾಂಧಿ ಕೇವಲ 2.64 ಕೋಟಿ ಹಿಂಬಾಲಕರನ್ನು ಹೊಂದಿ ಎರಡನೇ ಸ್ಥಾನದಲ್ಲಿದ್ದಾರೆ.

ವಿಶ್ವ ಅಗ್ರ 5 ನಾಯಕರ ಪಟ್ಟಿಯಲ್ಲಿ ಮೋದಿ ನಂ 1 ಆಗಿದ್ದರೆ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಎರಡನೇ ಸ್ಥಾನದಲ್ಲಿದ್ದಾರೆ. ಅವರು 3.81 ಕೋಟಿ ಫಾಲೋವರ್ ಗಳನ್ನಷ್ಟೇ ಹೊಂದಿದ್ದಾರೆ. ಅಂದರೆ ಮೋದಿಗಿಂತ ತೀರಾ ಕಡಿಮೆ ಫಾಲೋವರ್ ಗಳನ್ನು ಹೊಂದಿದ್ದಾರೆ. ಮೂರನೇ ಸ್ಥಾನದಲ್ಲಿ ಟರ್ಕಿ ಅಧ್ಯಕ್ಷ ಎರ್ಡೋಗನ್, ನಾಲ್ಕನೇ ಸ್ಥಾನದಲ್ಲಿ ಯುಎಇ ಮುಖ್ಯಸ್ಥ ಶೇಖ್ ಮೊಹಮ್ಮದ್, ಐದನೇ ಸ್ಥಾನದಲ್ಲಿ ಮೆಕ್ಸಿಕೊ ಅಧ್ಯಕ್ಷ ಆಂಡ್ರೆಸ್ ಇದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ