ಆ್ಯಪ್ ಆಧಾರಿತ ಬೈಕ್ ಸವಾರನಿಂದ ಯುವತಿಗೆ ಲೈಂಗಿಕ ಕಿರುಕುಳ

ಶುಕ್ರವಾರ, 27 ನವೆಂಬರ್ 2020 (06:44 IST)
ಕೋಲ್ಕತ್ತಾ : ಆ್ಯಪ್ ಆಧಾರಿತ ಬೈಕ್ ಸವಾರನೊಬ್ಬ ಅಲಿಪೋರ್ ನಿಂದ ಗಾರ್ಫಾ ಪ್ರದೇಶದ ರೆಸ್ಟೋರೆಂಟ್ ಗೆ ಪ್ರಯಾಣಿಸುವಾಗ ಮಹಿಳೆಯೊಬ್ಬಳಿಗೆ ಕಿರುಕುಳ ನೀಡಿದ ಘಟನೆ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದಿದೆ.

ಸವಾರಿಯ ವೇಳೆ ಆರೋಪಿ ಸಂತ್ರಸ್ತೆಗೆ ಅಶ್ಲೀಲ ಪ್ರಶ್ನೆಗಳನ್ನು ಕೇಳಿದ್ದಾನೆ. ಅಲ್ಲದೇ ಮುಖ್ಯ ರಸ್ತೆಯ ಮೂಲಕ ಹೋಗುವ ಬದಲು ಕಾಲುದಾರಿಯಲ್ಲಿ ಹೋಗಿ ಸುದೀರ್ಘ ಮಾರ್ಗವನ್ನು ತೆಗೆದುಕೊಂಡಿದ್ದಾನೆ. ಅಲ್ಲದೇ ಯುವತಿಗೆ ತನ್ನೊಂದಿಗೆ ಡೇಟಿಂಗ್ ಗೆ ಬರುವಂತೆ ಒತ್ತಾಯಿಸಿದ್ದಾನೆ.

ಈ ಬಗ್ಗೆ ಯುವತಿ ತನ್ನ ಫೇಸ್ ಬುಕ್ ಪೇಜ್ ನಲ್ಲಿ ಕೋಲ್ಕತ್ತಾ ಪೊಲೀಸರನ್ನು ಸಂಪರ್ಕಿಸಿ ಬೈಕ್ ಕಂಪೆನಿಯ ವಿರುದ್ಧ ದೂರು ನೀಡಿದ್ದಾಳೆ. ಬಳಿಕ ಪೊಲೀಸರು ಯುವತಿಯನ್ನು ಸಂಪರ್ಕಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ