ನವಂಬರ್ 17 ಕ್ಕೆ ಶಬರಿಮಲೆಯಲ್ಲಿ ನಡೆಯಲಿದೆ ಮತ್ತೊಂದು ಹೈಡ್ರಾಮಾ

ಗುರುವಾರ, 15 ನವೆಂಬರ್ 2018 (09:08 IST)
ತಿರುವನಂತಪುರಂ: 10 ರಿಂದ 50 ವರ್ಷದೊಳಗಿನ ಮಹಿಳೆಯರೂ ದೇಗುಲ ಪ್ರವೇಶಿಸಬಹುದು ಎಂಬ ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಶಬರಿಮಲೆ ಎರಡನೇ ಬಾರಿ ಭಕ್ತರಿಗಾಗಿ ತೆರೆದಿದ್ದು, ನವಂಬರ್ 17 ರಂದು ಹೈಡ್ರಾಮಾ ಒಂದಕ್ಕೆ ಸಾಕ್ಷಿಯಾಗುವ ಸಾಧ್ಯತೆಯಿದೆ.

ಯಾರು ಏನೇ ಪ್ರತಿಭಟನೆ ನಡೆಸಿದರೂ ಸರಿಯೇ ನವಂಬರ್ 17 ರಂದು ದೇವಾಲಯಕ್ಕೆ ಪ್ರವೇಶಿಸಿಯೇ ಸಿದ್ಧ ಎಂದು ಹೋರಾಟಗಾರ್ತಿ ತೃಪ್ತಿ ದೇಸಾಯಿ ಶಪಥ ಮಾಡಿದ್ದಾರೆ. ಅತ್ತ ಮಹಿಳೆಯರ ಪ್ರವೇಶ ವಿರೋಧಿಸಿ ಹೋರಾಟ ಮಾಡುತ್ತಿರುವ ರಾಹುಲ್ ಈಶ್ವರ್ ಯಾವುದೇ ಕಾರಣಕ್ಕೂ ಪ್ರವೇಶಕ್ಕೆ ಅವಕಾಶ ಕೊಡಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ.

ಹೀಗಾಗಿ ನವಂಬರ್ 17 ರಂದು ಶಬರಿಮಲೆಯಲ್ಲಿ ಹೈಡ್ರಾಮಾ ನಡೆಯುವುದು ಖಚಿತವಾಗಿದೆ. ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಹಲವು ಮಹಿಳೆಯರು ದೇವಾಲಯ ಪ್ರವೇಶಕ್ಕೆ ಪ್ರಯತ್ನ ಪಟ್ಟಿದ್ದರೂ ಪ್ರತಿಭಟನಾಕಾರರಿಂದಾಗಿ ಸಾಧ್ಯವಾಗಿರಲಿಲ್ಲ. ಈ ಬಾರಿ ಆ ದಾಖಲೆ ಮುರಿಯುತ್ತಾ ಎಂದು ನೋಡಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ