ಪೆಟ್ರೋಲ್ ಬಂಕ್ ತೆರೆಯಲಿರುವ ಐಒಸಿ

ಬುಧವಾರ, 10 ಆಗಸ್ಟ್ 2022 (11:08 IST)
ಕೊಲಂಬೋ : ದೇಶದಲ್ಲಿ 50 ಬಂಕ್ಗಳನ್ನು ತೆರೆಯಲು ಇಂಡಿಯನ್ ಆಯಿಲ್ ಕಂಪನಿಗೆ  ಶ್ರೀಲಂಕಾ ಸರ್ಕಾರ ಅನುಮತಿ ನೀಡಿದೆ.

ಇಂಧನ ಸಮಸ್ಯೆಯನ್ನು ಪರಿಹರಿಸಲು ಲಂಕಾ ಇಂಡಿಯನ್ ಆಯಿಲ್ ಕಾರ್ಪೊರೇಷನ್ಗೆ (LIOC) 50 ಹೊಸ ಇಂಧನ ಕೇಂದ್ರಗಳನ್ನು ತೆರೆಯಲು ಶ್ರೀಲಂಕಾ ಅನುಮೋದನೆ ನೀಡಿದೆ ಎಂದು ಕಂಪನಿಯ ಅಧಿಕಾರಿಯೊಬ್ಬರು ಸೋಮವಾರ ಹೇಳಿದ್ದಾರೆ.

LIOC ಭಾರತದ ಇಂಡಿಯನ್ ಆಯಿಲ್ ಕಾರ್ಪೊರೇಶನ್ನ ಅಂಗ ಸಂಸ್ಥೆಯಾಗಿದೆ ಮತ್ತು ಕೊಲಂಬೋ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಲಿಸ್ಟ್ ಮಾಡಲಾಗಿದೆ.

ಶ್ರೀಲಂಕಾದ ಅತಿ ದೊಡ್ಡ ಸರ್ಕಾರಿ ನಿಯಂತ್ರಣದಲ್ಲಿರುವ ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಷನ್  ದೇಶದಲ್ಲಿ ಸುಮಾರು 1,190 ಇಂಧನ ಕೇಂದ್ರಗಳನ್ನು ನಿರ್ವಹಿಸುತ್ತದೆ.  

ಎಲ್ಐಒಸಿ ಶ್ರೀಲಂಕಾದಲ್ಲಿರುವ ಸಣ್ಣ ಕಂಪನಿಯಾಗಿದ್ದು 216 ಇಂಧನ ಕೇಂದ್ರಗಳನ್ನು ಹೊಂದಿದೆ. ಮುಂದೆ 2 ಶತಕೋಟಿ ರೂ. ಬಂಡವಾಳವನ್ನು ಹೂಡಲಿದೆ ಎಂದು ಕಂಪನಿಯ ನಿರ್ದೇಶಕ ಮನೋಜ್ ಗುಪ್ತಾ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ