ಎಮ್ಮೆಯ ಮೂತ್ರವೇ ಉತ್ತಮ ಎಂದ IVRI ಅಧ್ಯಯನ

ಗುರುವಾರ, 13 ಏಪ್ರಿಲ್ 2023 (14:41 IST)
ಲಕ್ನೋ :  ಮಾನವರಿಗೆ ಗೋಮೂತ್ರ ಸೇವನೆ ಯೋಗ್ಯವಲ್ಲ ಎಂದು ಐವಿಆರ್ಐ ಅಧ್ಯಯನವೊಂದು ತಿಳಿಸಿದೆ. ಅಷ್ಟೇ ಅಲ್ಲ, ಗೋಮೂತ್ರಕ್ಕೆ ಹೋಲಿಸಿದರೆ ಎಮ್ಮೆಯ ಮೂತ್ರವೇ ಉತ್ತಮ ಎಂದು ವಿಶ್ಲೇಷಿಸಿದೆ.
 
ದಶಕಗಳಿಂದ ಪವಾಡ ಸದೃಶ ಔಷಧಿ ಎಂದು ಹೇಳಲಾಗುತ್ತಿರುವ ಗೋಮೂತ್ರವು ಹಾನಿಕಾರಕ ಸಂಸ್ಥೆಯ ಭೋಜ್ ರಾಜ್ ಸಿಂಗ್ ನೇತೃತ್ವದಲ್ಲಿ ಮೂವರು ಪಿಎಚ್ಡಿ ವಿದ್ಯಾರ್ಥಿಗಳು ನಡೆಸಿದ ಅಧ್ಯಯನದಲ್ಲಿ, ಆರೋಗ್ಯವಂತ ಹಸುಗಳು ಮತ್ತು ಎತ್ತುಗಳ ಮೂತ್ರದ ಮಾದರಿಗಳಲ್ಲಿ ಕನಿಷ್ಠ 14 ವಿಧದ ಹಾನಿಕಾರಕ ಬ್ಯಾಕ್ಟೀರಿಯಾಗಳಿದ್ದು,

ಹೊಟ್ಟೆಯ ಸೋಂಕನ್ನು ಉಂಟುಮಾಡುತ್ತವೆ ಎಂದು ಪತ್ತೆ ಹಚ್ಚಲಾಗಿದೆ. ಈ ಸಂಶೋಧನೆಯ ವರದಿಯನ್ನು ಆನ್ಲೈನ್ ಸಂಶೋಧನಾ ವೆಬ್ಸೈಟ್ ರಿಸರ್ಚ್ಗೇಟ್ನಲ್ಲಿ ಪ್ರಕಟಿಸಲಾಗಿದೆ.

ಇನ್ಸ್ಟಿಟ್ಯೂಟ್ನ ಎಪಿಡೆಮಿಯಾಲಜಿ ವಿಭಾಗದ ಮುಖ್ಯಸ್ಥ ಸಿಂಗ್, “ಹಸು, ಎಮ್ಮೆಗಳು ಮತ್ತು ಮಾನವರ ಮೂತ್ರದ 73 ಮಾದರಿಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿತ್ತು. ಎಮ್ಮೆಗಳ ಮೂತ್ರದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಚಟುವಟಿಕೆಯು ಹಸುಗಳಿಗಿಂತ ಹೆಚ್ಚು ಉತ್ತಮವಾಗಿದೆ. ಎಮ್ಮೆಯ ಮೂತ್ರವು ಬ್ಯಾಕ್ಟೀರಿಯಾ ವಿರುದ್ಧ ಪರಿಣಾಮಕಾರಿ ಹೋರಾಟ ನಡೆಸುತ್ತದೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ ಎಂದಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ