ಪುತ್ರನ ವಿಚ್ಛೇದನ ಸುದ್ದಿಯಿಂದ ನಿದ್ರೆಯಿಲ್ಲದೇ ಮಾನಸಿಕ ಖಿನ್ನತೆಗೊಳಗಾಗಿರುವ ಲಾಲೂ ಪ್ರಸಾದ್ ಯಾದವ್
ಅದಕ್ಕೆ ಕಾರಣ ಪುತ್ರ ತೇಜ್ ಪ್ರತಾಪ್ ಯಾದವ್ ವೈವಾಹಿಕ ಜೀವನದ ಸ್ಥಿತಿ ಗತಿ. ತೇಜ್ ಪ್ರತಾಪ್ ಯಾದವ್ ಮದುವೆಯಾದ ಆರೇ ತಿಂಗಳಿಗೆ ತಮ್ಮ ಪತ್ನಿ ಐಶ್ವರ್ಯಾ ರೈಗೆ ವಿಚ್ಛೇದನ ನೀಡಲು ನಿರ್ಧರಿಸಿರುವುದು ಲಾಲೂ ಯಾದವ್ ರನ್ನು ಕಂಗೆಡಿಸಿದೆಯಂತೆ.
ಇದೇ ಕಾರಣಕ್ಕೆ ಅವರು ಸರಿಯಾಗಿ ನಿದ್ರೆ ಮಾಡದೇ ಗಂಟೆಗಳಾಗಿವೆ ಎಂದು ವೈದ್ಯರು ಹೇಳಿದ್ದಾರೆ. ಸದ್ಯಕ್ಕೆ ರಾಂಚಿಯ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಾಲೂ ತೀವ್ರತರದ ಮಧುಮೇಹ, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದರ ಜತೆಗೆ ಪುತ್ರನ ವೈವಾಹಿಕ ಜೀವನ ಮುರಿದು ಬಿದ್ದ ಸಂಗತಿ ಕೇಳಿ ಮತ್ತಷ್ಟು ಖಿನ್ನರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.