2024ರ ಲೋಕಸಭೆ ಚುನಾವಣೆ: 7 ಹಂತದಲ್ಲಿ ಮತದಾನ, ಜೂನ್ 4ಕ್ಕೆ ಫಲಿತಾಂಶ

Sampriya

ಶನಿವಾರ, 16 ಮಾರ್ಚ್ 2024 (15:32 IST)
Photo Courtesy X
Photo Courtesy X
Photo Courtesy Facebook
 
ನವದೆಹಲಿ: 2024ರ ಲೋಕಸಭಾ ಚುನಾವಣೆ  7 ಹಂತದಲ್ಪಿ ಮತದಾನ ನಡೆಯಲಿದ್ದು, ಜೂನ್ 4ಕ್ಕೆ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು  ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದರು. 
 
ದೆಹಲಿಯ ವಿಜ್ಞಾನ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.  ಮತದಾನವು ಮುಕ್ತ, ಪಾರದರ್ಶಕ ಹಾಗೂ ನ್ಯಾಯ ಸಮ್ಮತವಾಗಿ ನಡೆಸಲು ಚುನಾವಣಾ ಆಯೋಗ ಸರ್ವಸನ್ನದ್ಧವಾಗಿದೆ.  543  ಕ್ಷೇತ್ರಗಳ ಚುನಾವಣೆ ಏ‍ಪ್ರಿಲ್ ರಂದು ನಡೆಯಲಿದೆ. ಕರ್ನಾಟಕ ಸೇರಿ ಎಲ್ಲ ರಾಜ್ಯಗಳ ಚುನಾವಣೆ ನಡೆಯಲಿದ್ದು, ಇಂದಿನಿಂದ ನೀತಿ ಸಂಹಿತೆ ಕೂಡಾ ಜಾರಿಯಾಗಲಿದೆ. 
 
18ನೇ ಲೋಕಸಭಾ ಚುನಾವಣೆಯನ್ನು ಎದುರಿಸಲು ಚುನಾವಣಾ ಆಯೋಗ ಸರ್ವ ಸನ್ನದ್ಧವಾಗಿದೆ. 1.8 ಕೋಟಿ ಮತದಾರರು ಮೊದಲ ಬಾರಿ ಮತದಾನ ಮಾಡಲಿದ್ದಾರೆ.  ದೇಶದಲ್ಲಿ ಸುಮಾರು 97 ಕೋಟಿ ಮತದಾರರು ಮತ ಚಲಾಯಿಸಲಿದ್ದಾರೆ. 1.5ಕೋಟಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ಚುನಾವಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು. 
 
12 ರಾಜ್ಯಗಳಲ್ಲಿ ಪುರುಷ ಮತದಾರರಗಿಂತ ಮಹಿಳಾ ಮತದಾರರ ಸಂಖ್ಯೆ ಜಾಸ್ತಿಯಾಗಿದೆ. 48 ಸಾವಿರ ಲಿಂಗತ್ವ ಅಲ್ಪಸಂಖ್ಯಾತ ಮತದಾರರು ಇದ್ದು, ಒಟ್ಟು 55 ಲಕ್ಷ ಇವಿಎಂಗಳ ಬಳಕೆಯಾಗಲಿದೆ ಎಂದರು. ಚುನಾವಣಾ ಆಯೋಗದ ನೂತನ ಸದಸ್ಯರಾದ ಜ್ಞಾನೇಶ್ ಕುಮಾರ್‌ ಹಾಗೂ ಸುಖಬೀರ್ ಸಿಂಗ್ ಇದ್ದರು. 
 
ಮತಗಟ್ಟೆಗಳಲ್ಲಿ ಮಾಹಿತಿ ಕೇಂದ್ರ, ಗಾಲಿ ಕುರ್ಚಿ ಕುಡಿಯುವ ನೀರಿನ ವ್ಯವಸ್ಥೆ ಇರಲಿದೆ. ಶೇ 40ಕ್ಕಿಂತ ಹೆಚ್ಚಿನ ಅಂಗವೈಕಲ್ಯತೆ ಹೊಂದಿರುವವರಿಗೆ ಮನೆಯಿಂದಲೇ ಮತದಾನ ಮಾಡುವ ಹಕ್ಕಿದೆ. 
 
ಅಭ್ಯರ್ಥಿಗಳು ತಮ್ಮ ಮೇಲಿನ ಕ್ರಿಮಿನಲ್ ಕೇಸ್‌ಗಳನ್ನು ಆಯೋಗಕ್ಕೆ ನೀಡುವುದು ಕಡ್ಡಾಯವಾಗಿದೆ. ಇನ್ನೂ 2.18 ಲಕ್ಷ ಶತಾಯುಷಿಗಳು ಮತ ಚಲಾಯಿಸಲಿ್ದ್ದಾರೆಂದು ರಾಜೀವ್ ಕುಮಾರ್ ಹೇಳಿದರು.
 
ಪ್ರಚಾರದ ವೇಳೆ ಹಣ ಹಂಚಿಕೆ, ಅಕ್ರಮವಾಗಿ ಹಣ ಸಾಗಿಸಿದರೆ  ಕಠಿಣ ಕ್ರಮ ಕೈಗೊಳ್ಳುಳ್ಳಲಾಗುವುದು. ಹಿಣಂಸಾಚಾರ ನಡೆಸಿದರೆ ಸೂಕ್ತ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ