ಇನ್ಮುಂದೆ ಮೇಡ್ ಇನ್ ಇಂಡಿಯಾ ಐಫೋನ್ ಉತ್ಪಾದನೆ

ಬುಧವಾರ, 14 ಸೆಪ್ಟಂಬರ್ 2022 (12:39 IST)
ನವದೆಹಲಿ : ಅಟೋಮೊಬೈಲ್, ಸಾಫ್ಟ್ವೇರ್ ಸೇರಿದಂತೆ ಹಲವು ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಟಾಟಾ ಸಮೂಹ ಸ್ಮಾರ್ಟ್ಫೋನ್ ಉದ್ಯಮಕ್ಕೆ ಕೈ ಹಾಕುವ ಸಾಧ್ಯತೆಯಿದೆ.

ಆಪಲ್ ಕಂಪನಿಯ ಐಫೋನ್ಗಳನ್ನು ಉತ್ಪಾದನೆ ಮಾಡಲು ಟಾಟಾ ಕಂಪನಿ ಚಿಂತನೆ ನಡೆಸಿದ್ದು, ಈ ಸಂಬಂಧ ಮಾತುಕತೆ ನಡೆಯುತ್ತಿದೆ ಎಂಬ ವರದಿ ಪ್ರಕಟವಾಗಿದೆ.

ಪ್ರಸ್ತುತ ಐಫೋನ್ಗಳನ್ನು ತೈವಾನ್ ಮೂಲದ ಫಾಕ್ಸ್ಕಾನ್ ಮತ್ತು ವಿಸ್ಟ್ರಾನ್ ಕಂಪನಿ ತಯಾರಿಸುತ್ತಿದೆ. ಬಹುತೇಕ ಐಫೋನ್ಗಳ ಉತ್ಪಾದನೆ ಚೀನಾ ಮತ್ತು ತೈವಾನ್ನಲ್ಲಿ ಆಗುತ್ತಿದೆ.

ಪ್ರಸ್ತುತ ಬಹುತೇಕ ದೇಶಗಳು ಚೀನಾ ಮೇಲಿನ ಅವಲಂಬನೆ ಕಡಿಮೆ ಮಾಡಲು ಮುಂದಾಗುತ್ತಿದೆ. ಈ ಸಂದರ್ಭದಲ್ಲೇ ಟಾಟಾ ಭಾರತದಲ್ಲೇ ಐಫೋನ್ ಉತ್ಪಾದನೆ ಮಾಡುವ ಕುರಿತು ಮಾತುಕತೆ ಆರಂಭಿಸಿದೆ.

ಈಗಾಗಲೇ ಫಾಕ್ಸ್ಕಾನ್ ಚೆನ್ನೈನಲ್ಲಿ ಘಟಕ ತೆರೆದಿದ್ದರೆ ವಿಸ್ಟ್ರಾನ್ ಕಂಪನಿ ಬೆಂಗಳೂರಿನ ಬಿಡದಿ ಮತ್ತು ಕೋಲಾರದ ನರಸಪುರದಲ್ಲಿ ಘಟಕ ತೆರೆದಿದೆ. ಈಗ ವಿಸ್ಟ್ರಾನ್ ಕಂಪನಿಯ ಜೊತೆ ಟಾಟಾ ಮಾತುಕತೆ ನಡೆಸುತ್ತಿದೆ. ಈ ಮಾತುಕತೆ ಯಶಸ್ವಿಯಾದರೆ ಜಂಟಿ ಪಾಲುದಾರಿಕೆಯಲ್ಲಿ ಐಫೋನ್ ಉತ್ಪಾದನೆಯಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ