ಪಾರ್ಟಿಯಲ್ಲಿ ಡ್ರಗ್ ಓವರ್ ಡೋಸ್ ಆಗಿ ವ್ಯಕ್ತಿ ಸಾವು: ಸ್ನೇಹಿತರು ಅರೆಸ್ಟ್
ರಾತ್ರಿಯಿಡೀ ಪಾರ್ಟಿ ಮಾಡಿದ್ದ ಸ್ನೇಹಿತರು ಮನಸೋ ಇಚ್ಛೆ ಮಾದಕ ವಸ್ತು ಸೇವಿಸಿದ್ದರು. ಪರಿಣಾಮ ಓವರ್ ಡೋಸ್ ಆಗಿ ಓರ್ವ ಸಾವನ್ನಪ್ಪಿದ್ದಾನೆ.
ಇದರಿಂದ ಭಯಗೊಂಡ ಇತರರು ಆತನ ಮೃತದೇಹವನ್ನು ಯಾರಿಗೂ ಗೊತ್ತಾಗದಂತೆ ಸಾಗಿಸಿ ಮಣ‍್ಣು ಮಾಡಲು ಹೊರಟಿದ್ದಾರೆ. ಆದರೆ ಇದು ಪೊಲೀಸರ ಕಣ್ಣಿಗೆ ಬಿದ್ದಿದ್ದು, ಸ್ನೇಹಿತರನ್ನು ಅರೆಸ್ಟ್ ಮಾಡಲಾಗಿದೆ.