ಬೇರೆಯವನ ಜತೆ ಮದುವೆಯಾಗುತ್ತಿದ್ದಾಳೆಂದು ನೇಣು ಬಿಗಿದು ಕೊಲೆ ಯತ್ನ

ಸೋಮವಾರ, 10 ಅಕ್ಟೋಬರ್ 2016 (11:19 IST)
ಮಾಜಿ ಪ್ರಿಯತಮೆ ಬೇರೆಯವನ ಜತೆ ನಿಶ್ಚಿತಾರ್ಥ ಮಾಡಿಕೊಂಡಳೆಂಬ ಕೋಪದಲ್ಲಿ ಪ್ರೇಮಿಯೊಬ್ಬ ತನ್ನ ಮಾಜಿ ಪ್ರಿಯತಮೆಯನ್ನು ನೇಣು ಬಿಗಿದು ಕೊಲ್ಲಲೆತ್ನಿಸಿದ ಹೇಯ ಘಟನೆ ಮಹಾರಾಷ್ಟ್ರದ ಪೂರ್ವ ಮಲಾಡ್‌ನಲ್ಲಿ ನಡೆದಿದೆ. ಆದರೆ ಯತ್ನ ವಿಫಲವಾಗಿದ್ದು ಮತ್ತೀಗ ಕಂಬಿ ಎಣಿಸುತ್ತಿದ್ದಾನೆ. 
ಘಟನೆಯ ವಿವರ:  ಆರೋಪಿ ರಾಕೇಶ್ ಗುಪ್ತಾ ಮತ್ತು ಪೀಡಿತ ಯುವತಿಗೆ ಕಳೆದ ನಾಲ್ಕು ವರ್ಷಗಳ ಹಿಂದೆ ಪ್ರೀತಿಯಾಗಿತ್ತು. ಆದರೆ ಹುಡುಗಿಯ ಮನೆಗೆ ಅದು ಇಷ್ಟವಿರಲಿಲ್ಲ. ಹೀಗಾಗಿ ಯುವತಿ ಅವನ ಜತೆ ಸಂಬಂಧವನ್ನು ಕಡಿದುಕೊಂಡು ಪೋಷಕರು ಮೆಚ್ಚಿದ  ನಿಶ್ಚಿತಾರ್ಥ ಮಾಡಿಕೊಂಡಿದ್ದಾಳೆ. 
 
ಇದರಿಂದ ಸಿಟ್ಟಿಗೆದ್ದ ರಾಕೇಶ್ ಆಕೆಯನ್ನು ಯಾವುದೋ ನೆಪ ಹೇಳಿ ತನ್ನ ಮನೆಗೆ ಕರೆದೊಯ್ದು ನೇಣು ಹಾಕಿ ಕೊಲ್ಲಲೆತ್ನಿಸಿದ್ದಾನೆ. ಯುವತಿ ಕಿರುಚಿಕೊಂಡಿದ್ದು ನೆರೆಯವರು ಸಹಾಯಕ್ಕೆ ಆಗಮಿಸಿದ್ದಾರೆ. ತಕ್ಷಣ ಯುವಕ ಅಲ್ಲಿಂದ ಪರಾರಿಯಾಗಿದ್ದು ಯುವತಿಯನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ