ಪಿಪಿಇ ಕಿಟ್ ನ ಲಾಭ ಬಳಸಿ ಹತ್ಯೆ ಮಾಡಿದರು!
ಮೃತಪಟ್ಟ ಯುವಕನ ತಂದೆ ಶ್ರೀಮಂತ ಉದ್ಯಮಿಯಾಗಿದ್ದರು. ಹಂತಕರಲ್ಲಿ ಓರ್ವನಿಗೆ 40 ಲಕ್ಷ ರೂ. ಸಾಲವಿತ್ತು. ಅದನ್ನು ತೀರಿಸಲು ಇತರ ಸಹಚರರೊಂದಿಗೆ ಸೇರಿಕೊಂಡು ಸಚಿನ್ ನನ್ನು ಅಪಹರಿಸಿದ್ದರು. ಬಳಿಕ ಆತನ ತಂದೆಯಿಂದ 2 ಕೋಟಿ ರೂ. ಪೀಕಲು ಪ್ಲ್ಯಾನ್ ಮಾಡಿದ್ದರು. ಆದರೆ ಕಂಠಪೂರ್ತಿ ಮದ್ಯ ಸೇವಿಸಿದ್ದ ಆರೋಪಿಗಳು ಸಚಿನ್ ನನ್ನು ಹತ್ಯೆ ಮಾಡಿದ್ದು, ಬಳಿಕ ಪಿಪಿಇ ಕಿಟ್ ಧರಿಸಿ ಮಣ್ಣು ಮಾಡಿದ್ದಾರೆ. ಬಳಿಕ ಸಚಿನ್ ತಾಯಿಗೆ ಆತನ ಫೋನ್ ನಿಂದಲೇ ಕರೆ ಮಾಡಿ ಹಣ ಕೊಡುವಂತೆ ಪೀಡಿಸಿದ್ದಾರೆ. ಆದರೆ ಮೊಬೈಲ್ ಜಾಡು ಹಿಡಿದು ಅಪರಾಧಿಗಳನ್ನು ಪೊಲೀಸರು ಬಂಧಿಸಿದ್ದಾರೆ.