NEET ಪರೀಕ್ಷೆ ಹೇಗಿತ್ತು ಎಂದರೆ ವಿದ್ಯಾರ್ಥಿಗಳು ಶಾಕ್ ಆಗ್ತಿದ್ದಾರೆ: ಕಾರಣ ಇಲ್ಲಿದೆ
2025 ನೇ ಸಾಲಿನ ನೀಟ್ ಪರೀಕ್ಷೆ ನಿನ್ನೆಯಷ್ಟೇ ನಡೆದಿದೆ. ಲಕ್ಷಾಂತರ ವಿದ್ಯಾರ್ಥಿಗಳು ಈ ಬಾರಿಯೂ ಪರೀಕ್ಷೆಗೆ ಹಾಜರಾಗಿದ್ದಾರೆ. ಆದರೆ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆ ನೋಡಿಯೇ ಕಂಗಾಲಾಗಿದ್ದಾರೆ.
ವೈದ್ಯಕೀಯ ಶಿಕ್ಷಣ ಸೇರಿದಂತೆ ವೃತ್ತಿಪರ ಕೋರ್ಸ್ ಪ್ರವೇಶಕ್ಕೆ ನಡೆಸಲಾಗುವ ನೀಟ್ ಪರೀಕ್ಷೆ ಕಠಿಣ ಪರೀಕ್ಷೆಗಳಲ್ಲಿ ಒಂದು. ಇದಕ್ಕಾಗಿ ವಿದ್ಯಾರ್ಥಿಗಳು ಸಾಕಷ್ಟು ಕೋಚಿಂಗ್ ಪಡೆದುಕೊಂಡು ಪರೀಕ್ಷೆಗೆ ಸಿದ್ಧತೆ ನಡೆಸುತ್ತಾರೆ.
ಆದರೆ ಈ ಬಾರಿ ನೀಟ್ ಪರೀಕ್ಷೆ ಹಿಂದೆಂದಿಗಿಂತಲೂ ಕಷ್ಟಕರವಾಗಿತ್ತು ಎನ್ನಲಾಗುತ್ತಿದೆ. ವಿಶೇಷವಾಗಿ ಫಿಸಿಕ್ಸ್ ಪರೀಕ್ಷೆಯಂತೂ ಅತ್ಯಂತ ಕಠಿಣದ್ದಾಗಿತ್ತು. ಜೆಇಇ ಎಕ್ಸಾಮ್ ರೀತಿ ಕಷ್ಟಕರವಾಗಿತ್ತು ಎಂದು ವಿದ್ಯಾರ್ಥಿಗಳು ಅಭಿಪ್ರಾಯಪಡುತ್ತಿದ್ದಾರೆ. 37 ವರ್ಷಗಳ ಇತಿಹಾಸದಲ್ಲೇ ಈ ನೀಟ್ ಪರೀಕ್ಷೆ ಅತ್ಯಂತ ಕಷ್ಟಕರವಾಗಿತ್ತು ಎಂದು ತಜ್ಞರೂ ಹೇಳುತ್ತಿದ್ದಾರೆ. ಹೀಗಾಗಿ ರಿಸಲ್ಟ್ ಹೇಗೆ ಬರುತ್ತೋ ಎಂಬ ಆತಂಕದಲ್ಲಿ ವಿದ್ಯಾರ್ಥಿಗಳಿದ್ದಾರೆ.