Operation Sindoor: ನಾವು ಅಪಾಯದಲ್ಲಿಲ್ಲ, ನಾವೇ ಅಪಾಯಕಾರಿಗಳು: ಟ್ರೆಂಡ್ ಆಗ್ತಿದೆ ಸ್ಲೋಗನ್
ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಉಗ್ರರ ಅಡಗುದಾಣಗಳನ್ನು ಗುರಿಯಾಗಿರಿಸಿ ನಿನ್ನೆ ತಡರಾತ್ರಿ ಭಾರತೀಯ ಸೇನೆ ಏರ್ ಸ್ಟ್ರೈಕ್ ನಡೆಸಿದೆ. ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರತೀಯರು ಸೇನೆ ಬಗ್ಗೆ ಹೆಮ್ಮೆಯಿಂದ ಸಂದೇಶ ರವಾನಿಸುತ್ತಿದ್ದಾರೆ.
ಇದರ ನಡುವೆ ಈಗ ವಿ ಆರ್ ನಾಟ್ ಇನ್ ಡೇಂಜರ್, ವಿ ಆರ್ ಡೇಂಜರ್ ಎಂಬ ಸ್ಲೋಗನ್ ವೈರಲ್ ಆಗ್ತಿದೆ. ಭಾರತ ಈಗ ಮೊದಲಿನಂತಲ್ಲ. ನಮ್ಮನ್ನು ಬೆದರಿಸಲು ಯತ್ನಿಸಿದರೆ ಸುಮ್ಮನೇ ಕುಳಿತುಕೊಳ್ಳುವವರಲ್ಲ. ತಿರುಗಿಸಿ ಹೊಡೆಯಲೂ ಗೊತ್ತು ಎನ್ನುತ್ತಿದ್ದಾರೆ.
ಪಹಲ್ಗಾಮ್ ದಾಳಿ ಬಳಿಕ ಭಾರತೀಯರಲ್ಲಿ ಪ್ರತೀಕಾರದ ಕಿಚ್ಚು ಹತ್ತಿತ್ತು. ತಕ್ಕ ತಿರುಗೇಟು ನೀಡಲೇಬೇಕು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಇದೀಗ ಭಾರತೀಯ ಸೇನೆ ಪ್ರತೀಕಾರದ ಬಳಿಕ ಇಡೀ ಭಾರತವೇ ಸಂಭ್ರಮದಲ್ಲಿದೆ.