ದೇಶದಲ್ಲಿ 1 ಕೋಟಿ ಹುದ್ದೆಗಳು ಖಾಲಿ ಇವೆ ಎಂದು ಬಿಜೆಪಿ ಸಂಸದ ವರುಣ್ ಗಾಂಧಿ ಹೇಳಿಕೆ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ 18 ತಿಂಗಳಲ್ಲಿ 10 ಲಕ್ಷ ಹುದ್ದೆ ನೇಮಕಾತಿ ಸೂಚನೆಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಮಂಗಳವಾರ ಬೆಳಿಗ್ಗೆ ಪ್ರಧಾನಿ ಟ್ವೀಟ್ ಮಾಡಿ 10 ಲಕ್ಷ ಹುದ್ದೆ ಸೃಷ್ಟಿಗೆ ಆದೇಶ ನೀಡಲಾಗಿದೆ ಎಂದು ಹೇಳಿಕೊಂಡಿದ್ದರು. ಕಳೆದ ಕೆಲವು ಸಮಯದಿಂದ ತಮ್ಮದೇ ಪಕ್ಷದ ನೀತಿಗಳನ್ನು ಬಹಿರಂಗವಾಗಿ ಖಂಡಿಸುತ್ತಿರುವ ಸಂಸದ ವರುಣ್ ಗಾಂಧಿ, ಟ್ವೀಟ್ ಮೂಲಕ ಪ್ರಧಾನಿಗೆ ಟಾಂಗ್ ನೀಡಿದ್ದಾರೆ.