ಎಮ್ಮೆಯ ವಿಚಾರದಲ್ಲಿಯೂ ಸೋಲನುಭವಿಸಿದ ಪಾಕಿಸ್ತಾನ

ಗುರುವಾರ, 19 ಡಿಸೆಂಬರ್ 2019 (08:55 IST)
ನವದೆಹಲಿ : ಆರ್ಥಿಕತೆ ಹಾಗೂ ಇತರ  ವಿಚಾರಗಳಲ್ಲಿ ಈಗಾಗಲೇ ಸೋಲನುಭವಿಸಿದ ಪಾಕಿಸ್ತಾನ ಇದೀಗ ಎಮ್ಮೆಯೊಂದರ ವಿಚಾರದಲ್ಲಿಯೂ ಸೋಲನುಭವಿಸಿದೆ.


ಹೌದು. ಹಾಲು ಕರೆಯುವ ಸ್ಪರ್ಧೆಯಲ್ಲಿಪಾಕಿಸ್ತಾನದ ಎಮ್ಮೆಯೊಂದು 32.50ಲೀಟರ್ ಹಾಲು ನೀಡಿ ದಾಖಲೆ ನಿರ್ಮಿಸಿತ್ತು. ಆದರೆ ಇದೀಗ ಅದಕ್ಕಿಂತ ಹೆಚ್ಚು ಹಾಲು ನೀಡುವುದರ ಮೂಲಕ ಭಾರತದ ಎಮ್ಮೆಯೊಂದು ಆ ದಾಖಲೆಯನ್ನು ಮುರಿದಿದೆ.

 

ಪಂಜಾಬ್ ನಲ್ಲಿ ಆಯೋಜಿಸಿದ ಹಾಲಿನ ಸ್ಪರ್ಧೆಯಲ್ಲಿ ಹರಿಯಾಣದ ಹಿಸಾರ್ ಜಿಲ್ಲೆಯ ಲಿಟಾನಿ ಗ್ರಾಮದ ರೈತನ ಎಮ್ಮೆಯೊಂದು 33.131 ಲೀಟರ್ ಹಾಲು ನೀಡಿದೆ. ಆ ಮೂಲಕ ಪಾಕಿಸ್ತಾನದ ಎಮ್ಮೆಯ ದಾಖಲೆ ಮುರಿದು ಪಾಕಿಸ್ತಾನ ಸೋಲನುಭವಿಸುವಂತೆ ಮಾಡಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ