ಬ್ರೂನೈನಲ್ಲಿದ್ದರೂ ಪ್ಯಾರಾ ಅಥ್ಲಿಟ್ ಗಳಿಗೆ ಕರೆ ಮಾಡಲು ಮರೆಯದ ಪ್ರಧಾನಿ ಮೋದಿ

Krishnaveni K

ಬುಧವಾರ, 4 ಸೆಪ್ಟಂಬರ್ 2024 (12:17 IST)
Photo Credit: Instagram
ನವದೆಹಲಿ: ಪ್ಯಾರಾ ಒಲಿಂಪಿಕ್ಸ್ ನಲ್ಲಿ ಭಾರತೀಯ ಕ್ರೀಡಾಪಟುಗಳು ಪದಕಗಳ ಮಳೆ ಸುರಿಸುತ್ತಿದ್ದರೆ ಇತ್ತ ವಿದೇಶ ಪ್ರವಾಸದಲ್ಲಿದ್ದರೂ ಪ್ರಧಾನಿ ಮೋದಿ ಭಾರತೀಯ ಅಥ್ಲಿಟ್ ಗಳಿಗೆ ಕರೆ ಮಾಡಿ ಅಭಿನಂದಿಸುವುದನ್ನು ಮರೆತಿಲ್ಲ.

ಭಾರತೀಯ ಕ್ರೀಡಾಗಳುಗಳು ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಪ್ಯಾರಾ ಒಲಿಂಪಿಕ್ಸ್ ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಈಗಾಗಲೇ ಭಾರತೀಯರು ಇದುವರೆಗೆ ಮೂರು ಚಿನ್ನ, 7 ಬೆಳ್ಳಿ, 10 ಕಂಚಿನ ಪದಕಗಳೊಂದಿಗೆ ಒಟ್ಟು 20 ಪದಕಗಳನ್ನು ಗೆದ್ದುಕೊಂಡಿದ್ದಾರೆ.

ಪ್ರತೀ ಬಾರಿಯೂ ಪ್ರಧಾನಿ ಮೋದಿ ಪದಕ ಗೆದ್ದ ಕ್ರೀಡಾಳುಗಳಿಗೆ ಕರೆ ಮಾಡಿ ಅಭಿನಂದಿಸುವುದನ್ನು ಮರೆಯುವುದಿಲ್ಲ. ಆದರೆ ಈಗ ಮೋದಿ ಬ್ರೂನೈ ದೇಶದ ಪ್ರವಾಸದಲ್ಲಿದ್ದಾರೆ. ಆದರೆ ವಿದೇಶದಲ್ಲಿದ್ದರೂ ಭಾರತೀಯ ಕ್ರೀಡಾಪಟುಗಳಿಗೆ ಕರೆ ಮಾಡಿ ಅಭಿನಂದಿಸುವುದನ್ನು ಮಾತ್ರ ಮರೆತಿಲ್ಲ.

ತಮ್ಮ ಬಿಡುವಿಲ್ಲದ  ವೇಳಾಪಟ್ಟಿಯ ನಡುವೆಯೂ ಬಿಡುವು ಮಾಡಿಕೊಂಡು ಭಾರತಕ್ಕೆ ಪದಕ ಗೆದ್ದುಕೊಟ್ಟ ಯೋಗೇಶ್ ಕಥುನಿಯಾ, ಸುಮಿತ್ ಆಂಟಿಲ್, ಶೀತಲ್ ದೇವಿ ಮತ್ತು ರಾಕೇಶ್ ಕುಮಾರ್ ಅವರೊಂದಿಗೆ ಫೋನ್ ಮೂಲಕ ಮೋದಿ ಮಾತನಾಡಿ ಶುಭಾಶಯ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ