ರಾಜೀನಾಮೆ ಬೇಡ ಎಂದು ಪ್ರಧಾನಿ ಮೋದಿ ರೈಲ್ವೇ ಸಚಿವರಿಗೆ ಹೇಳಿದ್ದರ ಅಸಲಿ ಕಾರಣ ಗೊತ್ತಾ?

ಗುರುವಾರ, 24 ಆಗಸ್ಟ್ 2017 (14:46 IST)
ನವದೆಹಲಿ: ಉತ್ತರ ಪ್ರದೇಶದಲ್ಲಿ ಬೆನ್ನು ಬೆನ್ನಿಗೇ ರೈಲ್ವೇ ದುರಂತ ಸಂಭವಿಸಿದ ಹಿನ್ನಲೆಯಲ್ಲಿ ರೈಲ್ವೇ ಸಚಿವ ಸುರೇಶ್ ಪ್ರಭು ರಾಜೀನಾಮೆಗೆ ಮುಂದಾಗಿದ್ದರೂ, ಪ್ರಧಾನಿ ಮೋದಿ ಬೇಡ ಎಂದಿದ್ದರು ಎಂದು ವರದಿಯಾಗಿತ್ತು.

 
ಇದರ ಅಸಲಿ ಕಾರಣ ಏನೆಂಬುದು ಬಹಿರಂಗವಾಗಿದೆ. ಅಸಲಿಗೆ ಪ್ರಧಾನಿ ಮೋದಿ ಸುರೇಶ್ ಪ್ರಭು ಜಾಗಕ್ಕೆ ಹೊಸ ಸಚಿವರನ್ನು ನೇಮಿಸಲು ಚಿಂತನೆ ನಡೆಸುತ್ತಿದ್ದಾರಂತೆ.

ಸುರೇಶ್ ಪ್ರಭು ಸ್ಥಾನ ತುಂಬಲು ಸಮರ್ಥರಾದ ಸಂಸದರರಿಗಾಗಿ ಪ್ರಧಾನಿ ಮೋದಿ ಹುಡುಕಾಟ ನಡೆಸುತ್ತಿದ್ದಾರೆ. ಹೀಗಾಗಿ ಸಮರ್ಥ ಸಚಿವರನ್ನು ಹುಡುಕಿದ ಮೇಲೆ ಸುರೇಶ್ ಪ್ರಭು ಸ್ಥಾನಕ್ಕೆ ಕತ್ತರಿ ಬೀಳಲಿದೆ.  ಇದೊಂದು ಮಹತ್ವದ ಇಲಾಖೆಯಾದ್ದರಿಂದ ಪ್ರಧಾನಿ ಮೋದಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ಇದನ್ನೂ ಓದಿ.. ತಮಿಳುನಾಡಿಗೆ ಮತ್ತೊಬ್ಬ ಸಿಎಂ?
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ