ನವದೆಹಲಿ : ವಿಜ್ಞಾನ ಕ್ಷೇತ್ರದಲ್ಲೂ ಭಾರತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದು ಪ್ರಧಾನಿ ಮೋದಿ ಅವರು ಭಾರತದ ವಿಜ್ಞಾನಿಗಳ ಪರಿಶ್ರಮ ಶ್ಲಾಘಿಸಿದ್ದಾರೆ.
ಭಾರತೀಯ ವಿಜ್ಞಾನಿಗಳು ಅಪಾರ ಕೊಡುಗೆ ನೀಡುತ್ತಿದ್ದಾರೆ. ಆತ್ಮನಿರ್ಭರ ಭಾರತ ನಿರ್ಮಾಣದಲ್ಲಿ ಅವರ ಕೊಡುಗೆ ಅಪಾರ. ನಮ್ಮ ದೇಶದ ವಿಜ್ಞಾನಿಗಳ ಸಾಧನೆ ಬಗ್ಗೆ ನಮಗೆ ಹೆಮ್ಮೆ ಇದೆ. 2 ಕೋವಿಡ್ ಲಸಿಕೆ ತಯಾರಿಸುವಲ್ಲಿ ಭಾರತ ಯಶಸ್ಸು ಗಳಿಸಿದೆ. ಹೊಸ ವರ್ಷ ಹಲವು ಅವಕಾಶಗಳನ್ನು ಹೊತ್ತು ತಂದಿದೆ. ವಿಶ್ವದಲ್ಲೇ ಅತಿ ದೊಡ್ಡ ವ್ಯಾಕ್ಸಿನೇಷನ್ ಕಾರ್ಯಕ್ರಮ, ಭಾರತದ ಎದುರು ಈಗ ಹೊಸ ಗುರಿ, ಸವಾಲುಗಳಿವೆ. ದೇಶಾದ್ಯಂತ ಜನರಿಗೆ ಕೊರೊನಾ ಲಸಿಕೆ ನೀಡಲಾಗುವುದು. ಭಾರತದಲ್ಲೇ ಅತಿ ಹೆಚ್ಚು ಕೊರೊನಾ ವ್ಯಾಕ್ಸಿನ್ ಉತ್ಪಾದನೆ ಆಗುತ್ತಿದೆ ಎಂದು ತಿಳಿಸಿದ್ದಾರೆ.
ಹಾಗೇ ಭಾರತ ಮುಂದಿನ ದಿನಗಳಲ್ಲಿ ವ್ಯಾಕ್ಸಿನ್ ರಫ್ತು ಮಾಡಲಿದೆ. ಈವರೆಗೆ ಭಾರತ ವಿದೇಶಗಳ ಮೇಲೆ ಅವಲಂಬನೆಯಾಗಿತ್ತು. ವಿದೇಶಿ ಉತ್ಮನ್ನಗಳ ಆಮದು ಹೆಚ್ಚಾಗಿತ್ತು. ಈಗ ಕಾಲ ಬದಲಾಗಿದೆ, ಆಮದು ಕಡಿಮೆಯಾಗಿದೆ. ಭಾರತೀಯ ಉತ್ಪನ್ನಗಳ ರಫ್ತು ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಭಾರತ ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಹೊಂದುತ್ತಿರೋ ದೇಶವಾಗಿದೆ. ಹಲವು ವಿಚಾರಗಳಲ್ಲಿ ಜಾಗತಿಕ ನಾಯಕನಾಗಿ ಬೆಳೆಯುತ್ತಿದೆ. ಇಡೀ ಜಗತ್ತಿಗೆ ಭಾರತ ಮಾದರಿ ರಾಷ್ಟ್ರವಾಗುತ್ತಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.