ಅಮೇಥಿಯಿಂದ ರಾಹುಲ್, ವಾರಣಾಸಿಯಿಂದ ಪ್ರಿಯಾಂಕಾ ಸ್ಪರ್ಧೆ

ಶನಿವಾರ, 19 ಆಗಸ್ಟ್ 2023 (12:04 IST)
ನವದೆಹಲಿ : ಕಾಂಗ್ರೆಸ್  ನಾಯಕ ಹಾಗೂ ವಯನಾಡ್ ಸಂಸದ ರಾಹುಲ್ ಗಾಂಧಿ ಅವರು 2024ರ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ಅಮೇಥಿಯಿಂದ ಸ್ಪರ್ಧಿಸಲಿದ್ದಾರೆ ಎಂದು ಯುಪಿ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷ ಅಜಯ್ ರೈ ಶುಕ್ರವಾರ ಹೇಳಿದ್ದಾರೆ.
 
ರಾಹುಲ್ ಗಾಂಧಿಯವರ ಸ್ಪರ್ಧೆ ಬಿಜೆಪಿ ನಾಯಕಿ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರೊಂದಿಗೆ ನೇರ ಹಣಾಹಣಿಗೆ ಕಾರಣವಾಗುವುದರಿಂದ ಕೂತುಹಲಕ್ಕೆ ಕಾರಣವಾಗಲಿದೆ.

2019ರ ಲೋಕಸಭೆ ಚುನಾವಣೆಯಲ್ಲಿ ಸ್ಮೃತಿ ಇರಾನಿ ಅವರು ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಅಮೇಥಿಯಲ್ಲಿ ಸುಮಾರು 55,000 ಮತಗಳ ಅಂತರದಿಂದ ರಾಹುಲ್ ಅವರನ್ನು ಸೋಲಿಸಿದ್ದರು. ವಯನಾಡ್ ಲೋಕಸಭಾ ಕ್ಷೇತ್ರದಿಂದ ಸಹ ಸ್ಪರ್ಧಿಸಿದ್ದ ರಾಹುಲ್ ಅಲ್ಲಿ ಗೆಲುವು ಸಾಧಿಸಿದ್ದರು. 

ಅಲ್ಲದೇ ವಾರಣಾಸಿಯಿಂದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲು ನಿರ್ಧರಿಸಿದರೆ, ಅವರ ಗೆಲುವಿಗೆ ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಶ್ರಮಿಸುತ್ತಾರೆ ಎಂದು ಇದೇ ವೇಳೆ ಅಜಯ್ ರೈ ಹೇಳಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ