ನವದೆಹಲಿ: ಭಾರತ್ ನ್ಯಾಯ್ ಜೋಡೋ ಯಾತ್ರೆ ವೇಳೆ ರಾಹುಲ್ ಗಾಂಧಿ ನಾಯಿಯೊಂದಕ್ಕೆ ಬಿಸ್ಕತ್ ನೀಡಿದಾಗ ಅದು ತಿನ್ನಲಿಲ್ಲವೆಂದು ಕಾರ್ಯಕರ್ತನಿಗೆ ನೀಡಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ವಿಡಿಯೋವನ್ನು ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಭಾರತ್ ನ್ಯಾಯ್ ಜೋಡೋ ಯಾತ್ರೆ ವೇಳೆ ಈ ಘಟನೆ ನಡೆದಿದೆ. ತೆರೆದ ವಾಹನದಲ್ಲಿ ರಾಹುಲ್ ರೋಡ್ ಶೋ ನಡೆಸುವಾಗ ಶ್ವಾನವೊಂದಕ್ಕೆ ಬಿಸ್ಕತ್ ತಿನಿಸಿದ್ದಾರೆ.
ಈ ವೇಳೆ ನಾಯಿ ಕೆಲವು ಬಿಸ್ಕತ್ ತಿಂದು ಉಳಿದಿದ್ದನ್ನು ಬಿಟ್ಟಿದೆ. ನಾಯಿ ತಿನ್ನದ ಬಿಸ್ಕತ್ ನ್ನು ಪಕ್ಕದಲ್ಲಿದ್ದ ಕಾರ್ಯಕರ್ತನಿಗೆ ರಾಹುಲ್ ನೀಡಿದ್ದಾರೆ. ಈ ವಿಡಿಯೋವನ್ನು ಹಂಚಿಕೊಂಡ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಕೆಲವು ದಿನಗಳ ಹಿಂದೆ ಕಾಂಗ್ರೆಸ್ ಅಧ‍್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಾರ್ಯಕರ್ತರನ್ನು ನಾಯಿಗೆ ಹೋಲಿಸಿದ್ದರು. ಪಕ್ಷದ ಅಧ‍್ಯಕ್ಷರು ಮತ್ತು ಮಾಜಿ ಅಧ್ಯಕ್ಷರು ಕಾರ್ಯಕರ್ತರನ್ನು ನಾಯಿಯಂತೆ ನಡೆಸಿಕೊಂಡರೆ ಆ ಪಕ್ಷವು ಉಳಿಯಲ್ಲ ಎಂದು ಬರೆದುಕೊಂಡಿದ್ದಾರೆ.
ಈ ವಿಡಿಯೋಗೆ ನೆಟ್ಟಿಗರು ಕಾಮೆಂಟ್ ಮಾಡಿದ್ದು, ರಾಹುಲ್ ವರ್ತನೆ ಬಗ್ಗೆ ಖಂಡಿಸಿದ್ದಾರೆ. ಬಿಜೆಪಿ ನಾಯಕರು ಇದು ಕಾಂಗ್ರೆಸ್ ನಾಯಕರು ಕಾರ್ತಕರ್ತರನ್ನು ನಡಸಿಕೊಳ್ಳುವ ರೀತಿ ಎಂದು ಟೀಕಿಸಿದ್ದಾರೆ. ರಾಹುಲ್ ಗಾಂಧಿಗೆ ಶ್ವಾನಗಳೆಂದರೆ ಬಲು ಪ್ರೀತಿ. ಈ ಹಿಂದೆಯೂ ಹಲವು ಬಾರಿ ಅವರು ನಾಯಿಗೆ ಆಹಾರ ತಿನಿಸುವ ಅಥವಾ ಅವುಗಳನ್ನು ಮುದ್ದಿಸುವ ವಿಡಿಯೋಗಳು ಬಹಿರಂಗವಾಗಿತ್ತು. ಆದರೆ ಈ ಬಾರಿ ಕಾರ್ಯಕರ್ತನಿಗೆ ಬಿಸ್ಕತ್ ತಿನಿಸಿದ ಅವರ ವರ್ತನೆ ಟೀಕೆಗೆ ಗುರಿಯಾಗಿದೆ.