ದಕ್ಷಿಣ ಭಾರತದಲ್ಲೀಗ ಹುಯ್ಯೋ ಹುಯ್ಯೋ ಮಳೆರಾಯ!

ಸೋಮವಾರ, 18 ಸೆಪ್ಟಂಬರ್ 2017 (09:47 IST)
ಬೆಂಗಳೂರು: ಇದುವರೆಗೆ ಮಳೆಯಿಲ್ಲ.. ಬರ.. ಎಂದು ವರುಣ ದೇವನಿಗೆ ಹಿಡಿಶಾಪ ಹಾಕುತ್ತಿದ್ದ ಮಂದಿಗೆ ಇದೀಗ ಮಳೆರಾಯ ಸಾಕು ಎನ್ನುವಷ್ಟು ಮಳೆ ಕರುಣಿಸುತ್ತಿದ್ದಾನೆ. ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ಹಲವೆಡೆ ವ್ಯಾಪಕ ಮಳೆಯಾಗುತ್ತಿದ್ದು, ಸಾಕಷ್ಟು ಹಾನಿ ಸಂಭವಿಸಿದೆ.


ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಹಲವೆಡೆ ಪ್ರವಾಹ ಭೀತಿ ಎದುರಾಗಿದೆ. ಭಾನುವಾರ ಪೂರ್ತಿ ಮಳೆಯಾದ್ದರಿಂದ ಬೆಂಗಳೂರಿಗರ ವೀಕೆಂಡ್ ಮಸ್ತಿಗೆ ಅಡ್ಡಿಯಾಯಿತು. ಇನ್ನು ನೆರೆಯ ಕೇರಳದಲ್ಲೂ ಆಕಾಶ ತೂತು ಬಿದ್ದಂತೆ ಮಳೆ ಸುರಿಯುತ್ತಿದ್ದು, ಇಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಇನ್ನೂ ಎರಡು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭೂ ಕುಸಿತವಾದ ಕಾರಣ ಕೊಟ್ಟಾಯಂ-ತಿರುವನಂತಪುರಂ ನಡುವೆ ರೈಲು ಸಂಚಾರ ರದ್ದಾಗಿದೆ. ಇನ್ನೊಂದೆಡೆ ಮುಂಬೈ, ಕೊಂಕಣ ಪ್ರದೇಶದಲ್ಲೂ ಇದೇ ಸ್ಥಿತಿಯಿದ್ದು, ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ… ಧೋನಿ ಚಿಪಾಕ್ ಮೈದಾನಕ್ಕೆ ಕಾಲಿಡುತ್ತಿದ್ದಂತೆ ನಡೆಯಿತೊಂದು ಅಚ್ಚರಿ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ