ರಾಜಸ್ಥಾನ: ಚುನಾವಣಾಧಿಕಾರಿ ಮೇಲೆ ಹಲ್ಲೆ ಮಾಡಿದ ಪಕ್ಷೇತರ ಅಭ್ಯರ್ಥಿ ಅರೆಸ್ಟ್‌, ಭುಗಿಲೆದ್ದ ಹಿಂಸಾಚಾರ

Sampriya

ಗುರುವಾರ, 14 ನವೆಂಬರ್ 2024 (16:13 IST)
Photo Courtesy X
ಜೈಪುರ: ಟೋಂಕ್ ಜಿಲ್ಲೆಯ ಡಿಯೋಲಿ-ಉನಿಯಾರಾ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆ ವೇಳೆ ಮತಗಟ್ಟೆಯ ಹೊರಗೆ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ)ಗೆ ಕಪಾಳಮೋಕ್ಷ ಮಾಡಿದ ಸ್ವತಂತ್ರ ಅಭ್ಯರ್ಥಿ ನರೇಶ್ ಮೀನಾ ಅವರನ್ನು ರಾಜಸ್ಥಾನ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಘಟನೆಯ ನಂತರ, ಬುಧವಾರ ತಡರಾತ್ರಿ ಜಿಲ್ಲೆಯಲ್ಲಿ ಉದ್ವಿಗ್ನತೆ ಉಲ್ಬಣಗೊಂಡಿದ್ದು, ಎಸ್‌ಡಿಎಂ ಅಮಿತ್ ಚೌಧರಿ ಮೇಲೆ ಹಲ್ಲೆ ನಡೆಸಿದ ನಂತರ ಪೊಲೀಸರು ಮೀನಾ ಅವರನ್ನು ಬಂಧಿಸಲು ಪ್ರಯತ್ನಿಸಿದರು.

ನಿನ್ನೆ ನಡೆದ ಮತದಾನದ ವೇಳೆ ಚುನಾವಣಾ ಪ್ರಕ್ರಿಯೆಗಳನ್ನು ನೋಡಿಕೊಳ್ಳುತ್ತಿದ್ದ ಚುನಾವಣಾಧಿಕಾರಿಯ ಮೇಲೆ ನರೇಶ್‌ ಮೀನಾ ಕಪಾಳಮೋಕ್ಷ ಮಾಡಿದ್ದು, ಅಲ್ಲೇ ಇದ್ದ ವ್ಯಕ್ತಿ ಇದನ್ನು ವಿಡಿಯೋ ಮಾಡಿದ್ದರು. ವೈರಲ್ ಆಗುತ್ತಿದ್ದ ಹಾಗೇ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇನ್ನೂ ನರೇಶ್ ಬಂಧನವನ್ನು ವಿರೋಧಿಸಿ ಅವರ ಬೆಂಬಲಿಗರು ಸಂರವತ ಗ್ರಾಮದ ಹೊರ ರಾಜ್ಯ ಹೆದ್ದಾರಿಗೆ ಬೆಂಕಿ ಹಚ್ಚಿದರು.

ಈ ಸಂಬಂಧ 60ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ರಾಜಸ್ಥಾನದ ಟೋಂಕ್ ಜಿಲ್ಲೆಯಲ್ಲಿ ಅಶಾಂತಿ, ಕಲ್ಲು ತೂರಾಟ ಮತ್ತು ಬೆಂಕಿ ಹಚ್ಚಿದ ಘಟನೆಗಳ ನಂತರ ಸುಮಾರು 60 ಜನರನ್ನು ಬಂಧಿಸಲಾಗಿದೆ. ಬುಧವಾರ ಡಿಯೋಲಿ-ಉನಿಯಾರಾ ವಿಧಾನಸಭಾ ಉಪಚುನಾವಣೆ ವೇಳೆ ಮತಗಟ್ಟೆಯಲ್ಲಿ ಸ್ವತಂತ್ರ ಅಭ್ಯರ್ಥಿಯೊಬ್ಬರು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಅವರಿಗೆ ಕಪಾಳಮೋಕ್ಷ ಮಾಡಿದ ನಂತರ ಹಿಂಸಾಚಾರ ಭುಗಿಲೆದ್ದಿದೆ.

ಟೋಂಕ್ ಜಿಲ್ಲೆಯ ಡಿಯೋಲಿ-ಉನಿಯಾರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಸ್ವತಂತ್ರ ಅಭ್ಯರ್ಥಿ ನರೇಶ್ ಮೀನಾ ಅವರನ್ನು ಎಸ್‌ಡಿಎಂ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ ಆರೋಪದ ನಂತರ ಪೊಲೀಸರು ನಿನ್ನೆ ತಡರಾತ್ರಿ ಸಮ್ರಾವತ ಗ್ರಾಮದಲ್ಲಿ ಬಂಧಿಸಲು ಪ್ರಯತ್ನಿಸಿದಾಗ ಗದ್ದಲ, ಕಲ್ಲು ತೂರಾಟ ಮತ್ತು ಬೆಂಕಿ ಹಚ್ಚಿದ ಘಟನೆ ನಡೆದಿದೆ. ಅಮಿತ್ ಚೌಧರಿ ನಿನ್ನೆ ಮತಗಟ್ಟೆಯಲ್ಲಿ ಹಲವು ವಾಹನಗಳಿಗೆ ಬೆಂಕಿ ಹಚ್ಚಿ ಧ್ವಂಸಗೊಳಿಸಿದ್ದಾರೆ ಈ ವೇಳೆ ಅಜ್ಮೀರ್ ರೇಂಜ್ ಐಜಿ ಓಂ ಪ್ರಕಾಶ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ