ಪೊಲೀಸ್ ಅಧಿಕಾರಿಗೆ ಬೆದರಿಕೆ ಹಾಕಿದ ಬಿಜೆಪಿ ಸಂಸದ ರಾಮ್ ಶಂಕರ್ ಕಟೆರಿಯಾ; ವೈರಲ್ ಆಯ್ತು ಬೆದರಿಕೆ ಆಡಿಯೋ
ಮಂಗಳವಾರ, 23 ಜನವರಿ 2018 (11:30 IST)
ಲಕ್ನೋ: ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ ಅಧ್ಯಕ್ಷ, ಆಗ್ರಾದ ಬಿಜೆಪಿ ಸಂಸದ ರಾಮ್ ಶಂಕರ್ ಕಟೆರಿಯಾ ಅವರು ಪೊಲೀಸ್ ಅಧಿಕಾರಿಯೊಬ್ಬರಿಗೆ ಬೆದರಿಕೆಯೊಡ್ಡಿದ್ದಾರೆ. ಅವರು ಬೆದರಿಕೆಯೊಡ್ಡಿದ ಆಡಿಯೊವೊಂದು ಸಾಮಾಜಿಕ ತಾಣಗಳಲ್ಲಿ ಈಗ ವೈರಲ್ ಆಗಿದೆ.
ಆಗ್ರಾದ ಬೊಡಾಲಾ ಔಟ್‍ಪೋಸ್ಟ್ ಉಸ್ತುವಾರಿ ವಹಿಸಿದ್ದ ಸಬ್ ಇನ್ಸ್ ಪೆಕ್ಟರ್ ಮಹೇಶ್ ಪಾಲ್ ಯಾದವ್ ಅವರಿಗೆ ಬಿಜೆಪಿ ಸಂಸದ ರಾಮ್ ಶಂಕರ್ ಕಟೆರಿಯಾ ಅವರು ಬೆದರಿಕೆಯೊಡ್ಡಿರುವ ಆಡಿಯೊ ಇದಾಗಿದೆ. ಒತ್ತುವರಿ ಮಾಡುವುದನ್ನು ವಿರೋಧಿಸಿದ ಮಹೇಶ್ ಪಾಲ್ ಯಾದವ್ ಅವರು ಆ ಪ್ರದೇಶದಲ್ಲಿ ವ್ಯಾಪಾರ ನಡೆಸದಂತೆ ಆದೇಶ ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಕೆಲವರು ಯಾದವ್ ಅವರು ತಮ್ಮ ಪ್ರದೇಶದಲ್ಲಿ ವ್ಯಾಪಾರ ಮಾಡಲು ಅನುಮತಿ ನೀಡುವುದಿಲ್ಲ ಎಂದು ಆರೋಪಿಸಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ