ಶರದ್ ಯಾದವ್ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಮುಕ್ತರು: ನಿತೀಶ್ ಕುಮಾರ್

ಶುಕ್ರವಾರ, 11 ಆಗಸ್ಟ್ 2017 (19:28 IST)
ಬಂಡಾಯ ನಾಯಕ ಶರದ್ ಯಾದವ್ ಅವರೊಂದಿಗೆ ಯಾವುದೇ ಸಾಮರಸ್ಯದಿಂದ ಬಾಗಿಲನ್ನು ಮುಚ್ಚಿರುವ ಜೆಡಿಯು ಮುಖ್ಯಸ್ಥ, ಬಿಹಾರ್ ಸಿಎಂ ನಿತೀಶ್ ಕುಮಾರ್, ಬಿಜೆಪಿಯೊಂದಿಗೆ ಮೈತ್ರಿ ಪಕ್ಷದ ನಿರ್ಧಾರವಾಗಿತ್ತೇ ಹೊರತು ನನ್ನ ನಿರ್ಧಾರವಾಗಿರಲಿಲ್ಲ, ಶರದ್ ಯಾದವ್ ತಮಗಿಷ್ಟ ಬಂದ ಯಾವುದೇ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಹೇಳಿದ್ದಾರೆ. 
 
ಶರದ್ ಯಾದವ್ ಅವರು ತಮಗೆ ಪೂರಕವಾದ ತೀರ್ಮಾನ ತೆಗೆದುಕೊಳ್ಳಲು ಮುಕ್ತರಾಗಿದ್ದಾರೆ.  ಪಕ್ಷ ಈಗಾಗಲೇ ತೀರ್ಮಾನ ತೆಗೆದುಕೊಂಡಿದೆ. ಪಕ್ಷದ ಒಪ್ಪಿಗೆಯೊಂದಿಗೆ ನಾನು ನಿರ್ಧಾರ ತೆಗೆದುಕೊಂಡಿದ್ದೇನೆ. ಅವರು ಬೇರೆ ಅಭಿಪ್ರಾಯವನ್ನು ಹೊಂದಿದ್ದರೆ ಹಾಗೆ ಮಾಡಲು ಮುಕ್ತರಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದ ನಂತರ ಸುದ್ದಿಗಾರರಿಗೆ ನಿತೀಶ್ ತಿಳಿಸಿದ್ದಾರೆ.
 
ಆರ್‌ಜೆಡಿ ಮತ್ತು ಕಾಂಗ್ರೆಸ್ ಪಕ್ಷದೊಂದಿಗಿನ ಮಹಾಮೈತ್ರಿಕೂಟವನ್ನು ತೊರೆದು ಬಿಜೆಪಿಯೊಂದಿಗೆ ಸೇರ್ಪಡೆಯಾದ ನಂತರ ಸಿಎಂ ನಿತೀಶ್ ಕುಮಾರ್ ಮೊದಲ ಬಾರಿಗೆ ನವದೆಹಲಿಗೆ ಆಗಮಿಸಿದ್ದಾರೆ.
 
ಇದು ಮೈತ್ರಿ ವಿರುದ್ಧ ಯಾದವ್ ಬಂಡಾಯಕ್ಕೆ ನಿತೀಶ್ ನೀಡಿದ ಮೊದಲ ನೇರ ಪ್ರತಿಕ್ರಿಯೆಯಾಗಿದೆ.
 
ಬಿಹಾರದ ಪ್ರವಾಸದಲ್ಲಿರುವ ರಾಜ್ಯಸಭೆಯಲ್ಲಿ ಪಕ್ಷದ ನಾಯಕರಾಗಿರುವ ಯಾದವ್, ನಾನು ಮಹಾಮೈತ್ರಿಕೂಟದೊಂದಿಗೆ ಮುಂದುವರಿಯುತ್ತೇನೆ. ನಿಜವಾದ ಜೆಡಿಯು ನಾಯಕರು ನಮ್ಮೊಂದಿಗಿದ್ದಾರೆ. ನಿತೀಶ್ ಕುಮಾರ್ ಸರ್ಕಾರಿ ಜೆಡಿಯು ಪಕ್ಷದವರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ