ಸಲಿಂಗಕಾಮಕ್ಕೆ ಹೆತ್ತ ಮಗನನ್ನೇ ಕೊಂದ ಪಾಪಿ ತಾಯಿ

geetha

ಗುರುವಾರ, 7 ಮಾರ್ಚ್ 2024 (17:42 IST)
ಪಶ್ಚಿಮ ಬಂಗಾಳ-ತನ್ನ ಸಲಿಂಗಕಾಮಿ ಸ್ನೇಹಿತೆ ಇಶ್ರತ್ ಪರ್ವೀನ್ ಜೊತೆ ಸರಸ ಸಲ್ಲಾಪದಲ್ಲಿ ತೊಡಗಿದ್ದ ವೇಳೆ ಮಗನಿಗೆ ತಾಯಿ ಸಿಕ್ಕಿಬಿದ್ದಿದ್ದಾಳೆ. ಇದಾದ ನಂತರ ಇಬ್ಬರೂ ಸೇರಿ ಹೆತ್ತ ಮಗನನ್ನೇ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.ಹತ್ಯೆಗೀಡಾದ 10 ವರ್ಷದ ಬಾಲಕನ ತಲೆಯಲ್ಲಿ ಹಲವು ಗಂಭೀರ ಗಾಯಗಳಾಗಿದ್ದು, ಕೈಗಳನ್ನು ಕತ್ತರಿಸಲಾಗಿದೆ.
 
ಇನ್ನು ಬಾಲಕನ ಹತ್ಯೆ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆಯ ಭಾಗವಾಗಿ ಸಿಸಿಟಿವಿಯ ಪರಿಶೀಲನೆಗೆ ಮಾಡಿದ್ದರು, ಜೊತೆಗೆ ಮೊಬೈಲ್ ಲೋಕೇಷನ್‌ಗಳನ್ನು ಪರೀಕ್ಷಿಸಿದ್ದರು. ಈ ವೇಳೆ ಅಪರಾಧ ಸ್ಥಳದಲ್ಲಿ ಇವರಿಬ್ಬರ ಮೊಬೈಲ್ ಲೋಕೇಷನ್ ಇರುವುದು ತಿಳಿದು ಬಂದಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರನ್ನು ಹಿಡಿದು ತದುಕಿದಾಗ ಬಾಲಕನ ಕೊಲೆಯನ್ನು ತಾವೇ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. 
 
ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ ಶಾಂತಾ ಶರ್ಮಾ, ಪರ್ವಿನ್ ಜೊತೆ ಆಕೆಯ ಮದ್ವೆಗೂ ಮೊದಲೇ ಸಂಬಂಧ ಹೊಂದಿದ್ದಳು. ಈ ವಿಚಾರ ಆಕೆಯ 10 ವರ್ಷದ ಮಗನಿಗೆ ಆಕಸ್ಮಿಕವಾಗಿ ತಿಳಿದು ಹೋಗಿತ್ತು. ಇದರಿಂದ ಇದು ಬೇರೆಯವರಿಗೂ ಎಲ್ಲಿ ತಿಳಿದು ಹೋಗುವುದೋ ಎಂದು ಭಯಗೊಂಡ ಶಾಂತಾ ಶರ್ಮಾ ತಮ್ಮ ಈ ಸಂಬಂಧವನ್ನು ಮುಚ್ಚಿಡುವ ಪ್ರಯತ್ನವಾಗಿ ತನ್ನ ಸಲಿಂಗಕಾಮಿ ಸಂಗಾತಿ ಪರ್ವೀನ್ ಜೊತೆ ಸೇರಿ ತನ್ನ ಮಗನ ಹತ್ಯೆಗೆ ಮುಹೂರ್ತವಿಟ್ಟಿದ್ದಾಳೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ