ತೇಜಸ್ವಿ ಯಾದವ್, ನಿತೀಶ್ ಕುಮಾರ್ ಒಂದೇ ವಿಮಾನದಲ್ಲಿ ಪ್ರಯಾಣ
ಇಂದು ದೆಹಲಿಯಲ್ಲಿ ಇಂಡಿಯಾ ಒಕ್ಕೂಟ ಮತ್ತು ಎನ್ ಡಿಎ ಒಕ್ಕೂಟದ ಸಭೆ ನಡೆಯಲಿದೆ. ಈ ಸಭೆಯಲ್ಲಿ ಪಾಲ್ಗೊಳ್ಳಲು ಎರಡೂ ಕೂಟದ ಮಿತ್ರ ಪಕ್ಷಗಳು ಇಂದು ದೆಹಲಿಗೆ ತೆರಳುತ್ತಿವೆ. ಅದರಲ್ಲೂ ವಿಶೇಷವಾಗಿ ಈಗ ಎನ್ ಡಿಎ ಕೂಟದಲ್ಲಿರುವ ನಿತೀಶ್ ಕುಮಾರ್ ಮತ್ತು ಇಂಡಿಯಾ ಒಕ್ಕೂಟದಲ್ಲಿರುವ ತೇಜಸ್ವಿ ಯಾದವ್ ಒಂದೇ ವಿಮಾನದಲ್ಲಿ ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದಾರೆ ಎನ್ನುವುದು ಕುತೂಹಲಕಾರಿಯಾಗಿದೆ.
ನಿತೀಶ್ ಕುಮಾರ್ ರನ್ನು ತಮ್ಮ ಬಣಕ್ಕೆ ಮತ್ತೆ ಸೆಳೆಯಲು ಇಂಡಿಯಾ ಒಕ್ಕೂಟ ಪ್ರಯತ್ನಿಸುತ್ತಿರುವ ಬೆನ್ನಲ್ಲೇ ಇದೀಗ ನಿತೀಶ್ ಮತ್ತು ತೇಜಸ್ವಿ ಒಂದೇ ವಿಮಾನದಲ್ಲಿ ಪ್ರಯಾಣ ಮಾಢುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಇದುವರೆಗೆ ನಿತೀಶ್ ಎನ್ ಡಿಎ ಜೊತೆಗಿದ್ದಾರೆ. ಆದರೆ ಇದೀಗ ಇಂಡಿಯಾ ಒಕ್ಕೂಟದ ಆಫರ್ ಗಳಿಗೆ ಮನಸೋತು ಬಣ ಬದಲಿಸುತ್ತಾರಾ ಕಾದುನೋಡಬೇಕಿದೆ. ಮೊದಲೇ ನಿತೀಶ್ ಬಣ ಬದಲಿಸುವುದರಲ್ಲಿ ನಿಸ್ಸೀಮ. ಹೀಗಾಗಿ ಅವರ ನಡೆ ಈಗ ಕುತೂಹಲಕ್ಕೆ ಕಾರಣವಾಗಿದೆ.