ಹೆರುವ ವಿಷಯದ ಆಯ್ಕೆ ಮಹಿಳೆಗೆ ಬಿಟ್ಟಿದ್ದು : ಹೈಕೋರ್ಟ್
ಸುಚಿತ್ರಾ ಶ್ರೀವಾಸ್ತವ ವರ್ಸಸ್ ಚಂಡೀಗಢ ಆಡಳಿತ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಉಲ್ಲೇಖಿಸಿ ನ್ಯಾಯಮೂರ್ತಿ ವಿ.ಜಿ ಅರುಣ್ ನೇತೃತ್ವದ ಏಕಸದಸ್ಯ ಪೀಠವು,
ಸಂವಿಧಾನದ-21 ವಿಧಿಯ ಅಡಿ ಸಂತಾನೋತ್ಪತ್ತಿ ಆಯ್ಕೆ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುವ ಹಕ್ಕು ಮಹಿಳೆಗೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಗರ್ಭಧರಿಸುವ ಅಥವಾ ಗರ್ಭಧರಿಸದೇ ಇರುವ ತನ್ನ ಆಯ್ಕೆಯ ಹಕ್ಕನ್ನು ಚಲಾಯಿಸಲು ಮಹಿಳೆಗೆ ಯಾವುದೇ ನಿರ್ಬಂಧವಿರುವುದಿಲ್ಲ. ಇದು ಆಕೆಯ ವೈಯಕ್ತಿಕ ಸ್ವಾತಂತ್ರ್ಯದ ಭಾಗವಾಗಿದೆ ಎಂದು ಪೀಠವು ತನ್ನ ಆದೇಶದಲ್ಲಿ ತಿಳಿಸಿದೆ.