ವಿದೇಶಕ್ಕೆ ತೆರಳಬೇಕೆಂಬ ಆಸೆಯನ್ನು ಈಡೇರಿಸಿಕೊಳ್ಳಲು ಅಣ್ಣನನ್ನೇ ಮದುವೆಯಾದ ಯುವತಿ

ಶನಿವಾರ, 2 ಫೆಬ್ರವರಿ 2019 (08:21 IST)
ಚಂಡೀಗಢ : ವಿದೇಶಕ್ಕೆ ತೆರಳಬೇಕೆಂಬ ಆಸೆಯನ್ನು ಈಡೇರಿಸಿಕೊಳ್ಳಲು ಸಂಬಂಧದಲ್ಲಿ ಅಣ್ಣನಾಗಬೇಕಿದ್ದವನ ಜೊತೆ ಮದ್ವೆಯಾಗಿದೆ ಎಂದು ನಕಲಿ ದಾಖಲೆ ಸೃಷ್ಟಿಸಿದ ಘಟನೆ ಪಂಜಾಬ್ ನಲ್ಲಿ ನಡೆದಿದೆ.

ಯುವತಿಯ ಸೋದರ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದನು. ತಾನೂ ಆಸ್ಟ್ರೇಲಿಯಾಕ್ಕೆ ತೆರಳಬೇಕೆಂಬ ಆಸೆಯಿಂದ ಸಹೋದರನೊಂದಿಗೆ ಮದುವೆಯಾಗಿರುವಂತೆ ನಕಲಿ ದಾಖಲೆ ಸೃಷ್ಟಿಸಿದ್ದಾಳೆ. ನಂತರ ತಮ್ಮ ಮದುವೆಯನ್ನು ನೋಂದಾಯಿಸಲು ಪಂಜಾಬ್ ನ ನ್ಯಾಯಾಲಯಕ್ಕೆ ಆಸ್ಟ್ರೇಲಿಯಾದ ವೀಸಾವನ್ನು ಹೊಂದಿದ್ದ ಅಣ್ಣನ ದಾಖಲೆಗಳನ್ನು ಉಪಯೋಗಿಸಿಕೊಂಡಿದ್ದಾಳೆ. ಬಳಿಕ ಪಾಸ್‍ಪೋರ್ಟ್ ಮಾಡಿಸಿಕೊಂಡು ಆಸ್ಟ್ರೇಲಿಯಾಕ್ಕೆ ತೆರಳಿದ್ದಾಳೆ.

 

ಮಹಿಳೆಯೊಬ್ಬರಿಗೆ ಈ ವಿಚಾರ ತಿಳಿದ ಹಿನ್ನಲೆಯಲ್ಲಿ ಯುವತಿ ಸಾಮಾಜಿಕ, ಕಾನೂನು ಮತ್ತು ಧಾರ್ಮಿಕ ವ್ಯವಸ್ಥೆಗಳನ್ನು ದುರುಪಯೋಗ ಮಾಡಿಕೊಂಡಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯಕ್ಕೆ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು  ತನಿಖೆ ನಡೆಸುತ್ತಿದ್ದಾರೆ. 

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ