ಹೆತ್ತ ತಾಯಿಯೊಬ್ಬಳು ತನ್ನ ಮಗುವನ್ನೇ ಕೊಲೆ ಮಾಡಿರುವ ಅಮಾನೀಯ ಘಟನೆ ನಡೆದಿದೆ.
23 ವರ್ಷದ ಮಹಿಳೆಗೆ ಮೊದಲ ಗಂಡನಿಂದ ಮಗು ಆಗಿತ್ತು. ಆತನನ್ನು ಬಿಟ್ಟು ಬಂದಿದ್ದಳು. ಎರಡನೇ ಗಂಡ ಸಾವನ್ನಪ್ಪಿದ್ದನು. ಮೂರನೇ ಗಂಡ ಅಪಘಾತದಲ್ಲಿ ಸಾವನ್ನಪ್ಪಿ ಎರಡ್ಮೂರು ತಿಂಗಳಾಗಿತ್ತು.
ಈ ನಡುವೆ ಮೊದಲ ಗಂಡನಿಂದ ಹುಟ್ಟಿದ ಮಗುವನ್ನು ತನ್ನ ನಾಲ್ಕನೇ ಮದುವೆ ಆಸೆಗಾಗಿ ಹೆತ್ತ ತಾಯಿ ಧರ್ಮಶೀಲಾ ದೇವಿ ಕೊಲೆ ಮಾಡಿದ್ದಾಳೆ ಎನ್ನಲಾಗಿದ್ದು, ಆಕೆಯನ್ನು ಬಂಧನ ಮಾಡಲಾಗಿದೆ.
ಬಿಹಾರ್ ದ ಪಾಟ್ನಾ ಪ್ರದೇಶದ ಹಸನಪುರ್ ಖಂಡಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.